ಕ್ಸೇವಿಯರ್ ಸಿ.ಬಿ.ಎಸ್.ಇ ಶಾಲೆ ಮಾನವಿಯಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಎಕ್ಸ್ ಫ್ಲೋರ್ – 2024 ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಕಾರ್ಯನಿರ್ವಹಿಕ ಇಂಜಿನಿಯರ್, ಶ್ರೀ ವಿದ್ಯಾಸಾಗರ್ ವ್ಯಾಲೆನ್ಸ್ ರವರು ಭಾಗವಹಿಸಿದ್ದರು.
ದೇಶದ ಸಾಮಾಜಿಕ ಆರ್ಥಿಕ ಭದ್ರತೆಗೆ ಅಚಲ ಗುರಿಗಳನ್ನು ಇಟ್ಟುಕೊಂಡ ಯುವ ಸಮುದಾಯ ಅತ್ಯಗತ್ಯ, ಇಂದಿನ ಮಕ್ಕಳು ಸಮರ್ಪಕ ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರೆ ಸಮಾಜದ ಹಲವಾರು ಸಮಸ್ಯೆಗಳಿಗೆ ಅದು ಅಂತಿಮ ಪರಿಹಾರ ನೀಡಬಲ್ಲದು, ಈ ನಿಟ್ಟಿನಲ್ಲಿ ಮಕ್ಕಳನ್ನು ಸಿದ್ಧಗೊಳಿಸುವಲ್ಲಿ ವಿಜ್ಞಾನ ಹಾಗೂ ಕಲೆಯ ಅಭಿವ್ಯಕ್ತಿಗೆ ಅವಕಾಶ ನೀಡುವ ಶಾಲಾ ವಸ್ತು ಪ್ರದರ್ಶನಗಳು ಅತಿ ಮುಖ್ಯ ವೇದಿಕೆಗಳಾಗಿವೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಈ ಕಾರ್ಯಕ್ರಮದಲ್ಲಿ ವ.ಫಾ.ಲಿಯೋ ಪಿರೇರಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವೈಜ್ಞಾನಿಕ ದೃಷ್ಟಿಕೋನ ಕೇವಲ ಒಂದು ಪರಿಕಲ್ಪನೆ ಅಲ್ಲ, ನಮ್ಮ ಸಂವಿಧಾನದ ಆಶಯವು ಹೌದು ಎಂದು ಅಭಿಪ್ರಾಯಪಟ್ಟರು ಮತ್ತು ಶಾಲೆಯ ಪ್ರಾಚಾರ್ಯರಾದ ವ.ಫಾ. ವಿಲ್ಸನ್ ಬೆನ್ನಿಸ್ ರವರು ಮಕ್ಕಳ ವಸ್ತು ಪ್ರದರ್ಶನವು ಪಠ್ಯದ ವಿಷಯಗಳನ್ನು ನೈಜ ಬದುಕಿನೊಂದಿಗೆ ಸಮೀಕರಿಸಿ ಕಲಿಯಲು ಸಹಾಯಕ ಎಂದು ಹೇಳಿದರು, ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರು ಬಸವರಾಜ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಾನವಿ ವಲಯಕ್ಕೆ ಸಂಬಂಧಿಸಿದಂತ ಸರಕಾರಿ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗಮನವನ್ನು ಸೆಳೆದರು, ಕ್ಸೇವಿಯರ್ ಶಾಲೆಯ ಮಕ್ಕಳು ಏರ್ಪಡಿಸಿದಂತ ಸರಳ ವಿಜ್ಞಾನ ಮಾದರಿಗಳ ಎಕ್ಸ್ ಫ್ಲೋರ್ – 2024 ವಸ್ತು ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಕ್ಸೇವಿಯರ್ ಶಾಲೆಯ ಮಕ್ಕಳ ಪಾಲಕರಿಗಾಗಿ ಏರ್ಪಡಿಸಿದ್ದ ಆಟೋಟಗಳಲ್ಲಿ ಪೋಷಕರು ಭಾಗವಹಿಸಿ, ಸಂತೋಷದಿಂದ ಮಕ್ಕಳಂತೆ ಆಡಿ ನಲಿದು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಮಕ್ಕಳು ಪ್ರದರ್ಶಿಸಿದ ವಸ್ತು ಪ್ರದರ್ಶನವನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸಿದರು.
ವರದಿಗಾರರು ರಂಗನಾಥ್ ಭಂಡಾರಿ H….