ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಮುಗಿದಿದ್ದು, ಇಂದು ಫಲಿತಾಂಶ ಪ್ರಕಟವಾಗುತ್ತಿದೆ. ಬಿಷ್ಣೋಯ್ ಗ್ಯಾಂಗ್ ಗುಂಡೇಟಿಗೆ ಬಲಿಯಾಗಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಅವರ ಪುತ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಜೀಶನ್ ಸಿದ್ದಿಕಿ ಹಿನ್ನಡೆ ಅನುಭವಿಸಿದ್ದಾರೆ.
ವಂಡ್ರೆ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಹಿಂದುಳಿದಿದ್ದಾರೆ. ಉದ್ಧವ್ ಠಾಕ್ರೆ ಅವರ ಸೋದರಳಿಯ ಶಿವಸೇನೆಯ (ಯುಬಿಟಿ) ವರುಣ್ ಸರ್ದೇಸಾಯಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸರ್ದೇಸಾಯಿ ಇಲ್ಲಿಯವರೆಗೆ 2,791 ಮತ್ತು ಸಿದ್ದಿಕಿ 2,129 ಮತಗಳನ್ನು ಗಳಿಸಿದ್ದಾರೆ.
ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಂದ ವಾರಗಳ ನಂತರ ಜೀಶನ್ ಸಿದ್ದಿಕಿ ಕಳೆದ ತಿಂಗಳು ಅಜಿತ್ ಪವಾರ್ ನೇತೃತ್ವದ ಬಣವನ್ನು ಸೇರಿದ್ದರು. 2019 ರಲ್ಲಿ ಕಾಂಗ್ರೆಸ್ ಸದಸ್ಯರಾಗಿ ವಂಡ್ರೆ ಪೂರ್ವದಲ್ಲಿ ಗೆದ್ದಿದ್ದ ಸಿದ್ದಿಕಿ ಅವರನ್ನು ಈ ವರ್ಷದ ಆರಂಭದಲ್ಲಿ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನದ ಆರೋಪದ ಮಧ್ಯೆ ಪಕ್ಷದಿಂದ ಹೊರಹಾಕಲಾಗಿತ್ತು.