ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸರ್ಕಾರದ ನೂತನ ಅಟಾರ್ನಿ ಜನರಲ್ ಆಗಿ ಪಾಮ್ ಬಾಂಡಿ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಅಟಾರ್ನಿ ಜನರಲ್ ಹುದ್ದೆಗೆ ಅವರ ಪ್ರಥಮ ಆಯ್ಕೆಯಾಗಿದಿದ್ದು ಮ್ಯಾಟ್ ಗಾಯೆಟ್ಝ್. ಆದರೆ ಅವರ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪಗಳೆನ್ನೆದುರಿಸುತ್ತಿರುವ ಬಗ್ಗೆ ವಿವಾದವುಂಟಾಗಿದ್ದರಿಂದ ಅವರ ಹೆಸರನ್ನು ಕೈಬಿಡಲಾಗಿತ್ತು. ಆನಂತರ ಟ್ರಂಪ್ ಅವರು ಫ್ಲೊರಿಡಾ ರಾಜ್ಯದ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರನ್ನು ದೇಶದ ನ್ಯಾಯಾಂಗ ಇಲಾಖೆಯ ಮುಖ್ಯಸ್ಥೆಯಾಗಿ ನೇಮಿಸಿದ್ದಾರೆ.
ಬಾಂಡಿ ಅವರು ಟ್ರಂಪ್ ಅವರ ಕಟ್ಟಾ ಬೆಂಬಲಿಗರು. ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕರಣದಲ್ಲಿ ಅವರನ್ನು ಪ್ರತಿನಿಧಿಸಿದ್ದ ವಕೀಲರುಗಳಲ್ಲಿ ಬಾಂಡಿ ಕೂಡಾ ಒಬ್ಬರು. ಮೇ ತಿಂಗಳಲ್ಲಿ ವಿಚಾರಣೆ ಪೂರ್ಣಗೊಂದ ಟ್ರಂಪ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿಯೂ ಟ್ರಂಪ್ ಪರ ವಾದಿಸಿದ್ದರು.