ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಸಾಕಷ್ಟು ದಿನಗಳೆ ಕಳೆದು ಹೋಗಿದೆ. ಈ ಮಧ್ಯೆ 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ಈ ಇಬ್ಬರು ದೊಡ್ಮನೆಗೆ ಕಾಲಿಟ್ಟ ಬಳಿಕ ಆಟ ಮತ್ತಷ್ಟು ರೋಚಕವಾಗಿದೆ. ಈ ಮಧ್ಯೆ ಗೋಲ್ಡ್ ಸುರೇಶ್ಗೆ ಅವಾಚ್ಯ ಪದ ಬಳಸಿದ್ದಕ್ಕೆ ರಜತ್ ಕಿಶನ್ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದ ವಾರ ರಜತ್ ಅವರು ಮನೆಯಲ್ಲಿ ಸಿಕ್ಕಾಪಟ್ಟೆ ಬೀಪ್ ಪದ ಬಳಕೆ ಮಾಡಿದ್ದರು. ಎಷ್ಟರ ಮಟ್ಟಿಗೆ ಅಂದರೆ ಗೋಲ್ಡ್ ಸುರೇಶ್ ಅವರು ಮನೆಯಿಂದ ಆಚೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದರು. ಇದೀಗ ಕಿಚ್ಚನ ಮುಂದೆ ಈ ಬಗ್ಗೆ ಪ್ರಸ್ತಾವನೆ ಆಗಿದೆ. ಕಿಚ್ಚ ಅವರು ರಜತ್ಗೆ ಕನ್ನಡದಲ್ಲಿ ತುಂಬಾ ಪದಗಳಿವೆ.
ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ ಹೇಳಿದ್ದಾರೆ. ನನಗೆ ಕೋಪ ಬಂದಾಗ ಇಂತಹದ್ದೆ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ಸು ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಕಿಚ್ಚ ಸುದೀಪ್ ಕೇಳಿದ್ರು. ಈಗ ನನಗೆ ತಪ್ಪಿನ ಅರಿವಾಯ್ತು ಎಂದಿದ್ದಾರೆ.
ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಕಿಚ್ಚ ಅವರು ನಕ್ಕು, ಮುಂದೆ ತಪ್ಪು ಆದ್ರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಸುದೀಪ್ ಸೈಲೆಂಟ್ ಆಗಿಯೇ ರಜತ್ ಗೆ ವಾರ್ನ್ ಮಾಡಿದ್ದಾರೆ.
ಇನ್ಮುಂದೆ ಇಂತಹ ತಪ್ಪು ಮಾಡಲ್ಲ ಅಂತ ರಜತ್ ಹೇಳಿದ್ರು. ಮತ್ತೆ ರಿಪೀಟ್ ಆಗಲ್ಲ ಎಂದ ರಜತ್ಗೆ, ರಿಪೀಟ್ ಆದ್ರೆ ಬಿಗ್ ಬಾಸ್ ಮನೆಯ ಬಾಗಿಲಿಗೆ 2 ಕೀ ಇದೆ. ಒಂದು ಬಿಗ್ ಬಾಸ್ ಬಳಿ ಇದೆ, ಇನ್ನೊಂದು ನನ್ನ ಕೈಯಲ್ಲಿದೆ ಎಂದು. ಒಂದು ಸೀಸನ್ನಲ್ಲಿ ನಾನೇ ಬಳಸಿದ್ದೆ. ಮತ್ತೆ ಬಳಸುವಂತೆ ಮಾಡ್ಬೇಡಿ ಎಂದು ಸುದೀಪ್ ಎಚ್ಚರಿಕೆ ನೀಡಿದ್ದರು.