ಬೆಂಗಳೂರು: ಬಿಜೆಪಿ ಕಾಲದಲ್ಲೇ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿದ್ದಾರಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಟೀಮ್ ಹೊರಟಿರೋದು ಬಿಜೆಪಿಯವರಿಗೆ ಮುಖಭಂಗ ಮಾಡೋದಕ್ಕೆ. ಬಿಜೆಪಿಯವರು ಹೆಚ್ಚು ನೊಟೀಸ್ ಕೊಟ್ಟಿದ್ದಾರೆ ಎಂದು ಗೊತ್ತಾದ ಮೇಲೂ ಇವರು ಪ್ರವಾಸ ಹೊರಟಿದ್ದಾರೆ ಅಂದ್ರೆ, ಬಿಜೆಪಿಯವರಿಗೆ ಮುಜುಗರ ಮಾಡಲು ಹೊರಟಿದ್ದಾರೆ ಅಂತ ನನಗನ್ನಿಸುತ್ತೆ.
ಇಲ್ಲ ಅಂದ್ರೆ ಯಾಕ್ ಹೋಗ್ತಾರೆ ಅವರು? ಬಿಜೆಪಿ ಕಾಲದಲ್ಲೇ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿದ್ದಾರಲ್ಲ, ಅದನ್ನೆಲ್ಲ ಎಕ್ಸ್ಪೋಸ್ ಮಾಡಲು ಯತ್ನಾಳ್ ಹೋಗ್ತಿದ್ದಾರೆ ಅಂತ ಅರ್ಥ. ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿತ್ತು ಅಂತ ಇದೆಯಲ್ಲ, ಆದ್ದರಿಂದ ಅವರಿಬ್ಬರನ್ನೂ ಎಕ್ಸ್ಪೋಸ್ ಮಾಡಲು ಹೊರಟಿದ್ದಾರೆ ಅನಿಸುತ್ತೆ.
ಹಿಂದೆ ಬಿಜೆಪಿ ವಕ್ಫ್ ನೊಟೀಸ್ ಕೊಟ್ಟಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ ಆ ಸಂಧರ್ಭದಲ್ಲಿ. ಅದನ್ನ ನಾವು ಇಶ್ಯೂ ಆಗಿ ತೆಗೆದುಕೊಂಡಿರಲಿಲ್ಲ. ಈಗ ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.