ಕಾರ್ಪೋರೇಟರ್ ವೇಲು ನಾಯಕ್ ಗೆ ಜಾತಿ ನಿಂದನೆ ಪ್ರಕರಣ ಆರ್ ಆರ್ ನಗರ ಶಾಸಕ ಮುನಿರತ್ನ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಗುತ್ತಿಗೆದಾರ ಚೆಲುವರಾಜು ಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದ ಆರೋಪ ಪ್ರಕರಣದ ಆಡಿಯೋ ರಿಪೋರ್ಟ್ FSL ನಿಂದ ಬಂದಿದ್ದು ಮುನಿರತ್ನ ಸಂಕಷ್ಟ ಶುರುವಾಗಿದೆ. ಇದಾರೆ ಕಂಪ್ಲೇಂಟ್ ಡಿಟೇಲ್ಸ್.
ಕಳೆದ ಸೆಪ್ಟೆಂಬರ್ನಲ್ಲಿ ಗುತ್ತಿಗೆದಾರ ಚೆಲುವರಾಜ್, ಹಾಗೂ ವೇಲುನಾಯಕ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂಧನೆ ಮಾಡಿದ್ದ ಆರ್ ಆರ್ ನಗರ ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಸ್ಟೇಷನ್ ನಲ್ಲಿ ಜಾತಿ ನಿಂಧನೆ ಕೇಸ್ ದಾಖಲಾಗಿತ್ತು.ಅಂದ್ರ ಗೆ ಹೋಗುತಿದ ಮುನಿರತ್ನ ನನ್ನು ಕೋಲಾರದಲ್ಲಿ ವಶಕ್ಕೆ ಪಡೆದಿದ್ರು, ಆದಾದ ಬಳಿಕ ಕಗ್ಗಲಿಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್ ಕೂಡ ದಾಖಲಾಗಿತ್ತು.ಎರಡು ಪ್ರಕರಣಗಳನ್ನ ರಾಜ್ಯ ಸರ್ಕಾರ ಎಸ್ ಐ ಟಿ ಗೆ ವರ್ಗಾವಣೆ ಮಾಡಿತ್ತು..
ಇನ್ನೂ ದೂರುದಾರ ನೀಡಿದ್ದ ಆಡಿಯೋ ಕ್ಲಿಪ್ ನ್ನು ಎಸ್ ಐ ಟಿ ಅಧಿಕಾರಿಗಳು ಎಪ್ ಎಸ್ ಎಲ್ ಗೆ ರವಾನೆ ಮಾಡಿದ್ರು. ಇದೀಗ ಅದರ ವರದಿ ಬಂದಿದ್ದು.ಆಡಿಯೋ ದಲ್ಲಿ ಮಾತನಾಡಿಇರುವುದು ಶಾಸಕ ಮುನಿರತ್ನ ಅವರದ್ದೇ ಎಂದು ಧೃಡಪಟ್ಟಿದೆ ಇನ್ನೂ ವೈಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆಂಧ್ರಪ್ರದೇಶ ಕ್ಕೆ ಎಸ್ಕೇಪ್ ಆಗುತ್ತಿದ್ದ ಮುನಿರತ್ನನನ್ನು .ಕೋಲಾರದ ಬಳಿ ಪೋಲಿಸರು ವಶಕ್ಕೆ ಪಡೆದಿದ್ರು.
ಇನ್ನೂ ರಾಮನಗರದ ಕಗ್ಗಲಿಪುರ ಠಾಣೆಯಲ್ಲಿ ಶಾಸಕ ಮುನಿರತ್ನ ಸೇರಿ ಆರು ಜನರ ವಿರುದ್ಧ ಮಹಿಳೆಯೋಬ್ಬರು ಲೈಂಗಿಕ ಕಿರುಕುಳ ಅತ್ಯಾಚಾರ ಕೇಸ್ ನೀಡಿದ್ದರು.ಜಾತಿ ನಿಂಧನೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಶಾಸಕ ಮುನಿರತ್ನ ಅವರನ್ನ ಬಾಡಿ ವಾರೆಂಟ್ ಮೇಲೆ ಕಸ್ಟಡಿ ಗೆ ಪಡೆದು ವಿಚಾರಣೆ ನಡೆಸಿದ್ರು. ಸದ್ಯ ಇದೀಗ ಮಧ್ಯಂತರ ಜಾಮೀನು ಪಡೆದು ಹೊರಗಡೆ ಇರುವ ಶಾಸಕನಿಗೆ ಮತ್ತೆ ಢವ ಢವ ಶುರುವಾಗಿದೆ.. ಒಟ್ಟಿನಲ್ಲಿ FSL ರಿಪೋರ್ಟ್ SIT ಕೈ ಸೇರಿದು ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದ ಶಾಸಕ ಮುನಿರತ್ನ ಗೆ ಈಗ ಕಾನೂನು ಕಂಟಕ ಎದುರಾಗಿದೆ. ಮತ್ತೆ ಜೈಲು ಸೇರ್ತಾರಾ..? ಅನ್ನೋದು ಕಾದು ನೋಡಬೇಕು.