ನರ್ಸಗಳ ಸೋಗಿನಲ್ಲಿ ಬಂದು ಪೋಷಕರಿಗೆ ಪುಸಲಾಯಿಸಿ ಮಗು ಹೊತ್ತೊಯ್ದಿದ್ದ ಕಲಬುರಗಿ ಜಿಲ್ಲಾಸ್ಪತ್ರೆಯ ಪ್ರಕರಣ ಸುಖಾಂತ್ಯಗೊಂಡಿದ್ದು 48 ಗಂಟೆಯಲ್ಲಿಯೇ ಪತ್ತೆಯಾಗಿ ಮಗು ತಾಯಿ ಮಡಿಲು ಸೇರಿದೆ..ರಾವೂರು ಗ್ರಾಮದ ಕಸ್ತೂರಿ ಎಂಬುವವರ ಗಂಡುಮಗುವನ್ನ ನರ್ಸ್ ವೇಷಧಾರಿ ಲ್ಯಾಬ್ ಬಳಿ ಬಂದು ನಿಮ್ಮ ಮಗು ನನಗೆ ಕೊಟ್ಟು ನೀವು ವಾರ್ಡಿಗೆ ರಿಪೋರ್ಟ್ ಕಾರ್ಡ್ ತನ್ನಿ ಅಂತ ಮಗು ಇಸ್ಕೊಂಡು ರೈಟ್ ಆಗಿದ್ಳು.
ಈ ಬಗ್ಗೆ ಬ್ರಹ್ಮಪುರ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು..ಕೇಸ್ ಬೆನ್ನತ್ತಿದ ವಿಶೇಷ ತಂಡ ಫಾತಿಮಾ ಅಂಡ್ ಗ್ಯಾಂಗ್ ಸೇರಿ ಮೂವರನ್ನ ಬಂಧಿಸಿ ಮಗುವನ್ನ ಬಚಾವ್ ಮಾಡಿದೆ..ಒಟ್ಟಾರೆ ಆತಂಕದಲ್ಲಿದ್ದ ಪೋಷಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..