‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾದ ನಿರ್ದೇಶಕ ಅಭಿಷೇಕ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ನೋಡಿ ನಿಶ್ಚಿಯಿಸಿದ ಸಾಕ್ಷಾ ಶೆಟ್ಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅಭಿಷೇಕ್ ಶೆಟ್ಟಿ ಮದುವೆಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮನ್ನು ಹಾರೈಸಿ ಎಂದು ಮನವಿ ಮಾಡಿದ್ದಾರೆ
ಮದುವೆಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿರುವ ಅಭಿಷೇಕ್ ಶೆಟ್ಟಿ, ನಿಮ್ಮೆಲ್ಲರ ಆಶೀರ್ವಾದ ಇರಲಿ. ಕೆಲಸದ ಒತ್ತಡದಿಂದಾಗಿ ಎಲ್ಲರನ್ನೂ ಕರೆಯೋಕೆ ಆಗಿಲ್ಲ ಎಂದಿನಂತೆ ಪ್ರೀತಿ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.
ನವ ಜೋಡಿ ಗೋಲ್ಡನ್ ವಸ್ತ್ರದಲ್ಲಿ ಮಿಂಚಿದ್ದಾರೆ. ಇಬ್ಬರು ಸಾಕಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದು ಜೋಡಿಗೆ ಸಾಕಷ್ಟು ಮಂದಿ ಬೆಸ್ಟ್ ಕಾಂಪ್ಲಿಮೆಂಟ್ಸ್ ನೀಡಿದ್ದಾರೆ. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಾಕ್ಷಾ ಅವರನ್ನು ಅಭಿಷೇಕ್ ಕುಂದಾಪುರದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಕೈ ಹಿಡಿದಿದ್ದಾರೆ. ಇದೀಗ ನವ ದಂಪತಿಗಳಿಗೆ ಸಿನಿಮಾ ರಂಗದವರು, ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.