ನೊಯ್ಡಾ:- ನರ್ಸ್ ಮೇಲೆ ಗ್ಯಾಂಗ್ ರೇಪ್ ನಡೆಸಿದ ಕಿಡಿಗೇಡಿಗಳು ಬಳಿಕ ಆಕೆಯ ಖಾಸಗಿ ಅಂಗಕ್ಕೆ ಕೋಲು, ಮೆಣಸಿನ ಪುಡಿ ತುರುಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಜಲೌನ್ನಲ್ಲಿ ಜರುಗಿದೆ.
ಮಹಿಳೆಯ ಕುಟುಂಬಸ್ಥರು ಈ ಬಗ್ಗೆ ವಿವರ ನೀಡಿದ್ದು, ಅತ್ಯಾಚಾರಿಗಳು ಆಕೆಯ ಖಾಸಗಿ ಭಾಗಗಳಿಗೆ ಕೋಲು ಮತ್ತು ಮೆಣಸಿನ ಪುಡಿಯನ್ನು ತುರುಕಿ ಹಿಂಸೆ ನೀಡಿದ್ದಾರೆ. ಇದಕ್ಕೂ ಮುಂಚೆ ಅತ್ಯಾಚಾರ ನಡೆಸಿದ್ದಾರೆ ಎಂದಿದ್ದಾರೆ.
ಇಂದು ಬೆಳಗ್ಗೆ ಚುರ್ಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ನರ್ಸ್ ಅನ್ನು ಅಡ್ಡಗಟ್ಟಿ, ಆಕೆಯನ್ನು ಪೊದೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆಕೆಯ ಪತಿ ವಿವರಿಸಿದ್ದಾರೆ.
ಆ ಮಹಿಳೆಯು ತನ್ನ ಹಳ್ಳಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ವಿವಾದದ ಸಂದರ್ಭದಲ್ಲಿ ವ್ಯಕ್ತಿ ಮತ್ತು ಆತನ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಂತದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ