ಬೆಂಗಳೂರು:- ಆದಾಯ ಹೆಚ್ಚಿಸಲು ಬಿಎಂಟಿಸಿ ಹೊಸ ಜಾಹೀರಾತು ನೀತಿ ತಂದಿದ್ದು, ಬಸ್ ಸುತ್ತ ಜಾಹೀರಾತು ಹಾಕಲು ಟೆಂಡರ್ ಯೋಜನೆ ರೂಪಿಸಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ, ಆದಾಯ ಹೆಚ್ಚಿಸಲು ಹೊಸ ಜಾಹೀರಾತು ನೀತಿ ರೂಪಿಸಿದೆ. ಈ ಮೂಲಕ ಆದಾಯ ಸಂಗ್ರಹಕ್ಕೆ ಹೊರಟಿದೆ. ಇದೀಗ ಬಸ್ ಸುತ್ತ ಇಡೀ ಜಾಹೀರಾತು ಹಾಕಲು ಅವಕಾಶ ಕೊಡುವ ಮೂಲಕ ಆದಾಯ ಹೆಚ್ಚಿಸಲು ಯೋಜನೆ ರೂಪಿಸಿದೆ.
3000 ಬಸ್ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ಮಾಡಿದೆ. ಇಷ್ಟು ದಿನ ಬಸ್ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇತ್ತು ಇದೀಗ. ಬಸ್ಗಳ ಮುಂದಿನ ಮತ್ತು ಹಿಂಭಾಗದ ಗಾಜುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಡಿಸೆಂಬರ್- 7 ರ ವರೆಗೆ ಟೆಂಡರ್ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.