ಕೊಪ್ಪಳ: ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಂಸದ ಹೆಚ್ ಜಿ ರಾಮುಲುರ ಹಿರಿಯ ಪುತ್ರ ಹೆಚ್ ಆರ್ ಶ್ರೀನಾಥ ಹಾಗೂ ಕಿರಿಯ ಪುತ್ರ ಹೆಚ್ ಆರ್ ಚನ್ನಕೇಶವ ಈಗ ರಾಜಕೀಯ ನೆಲೆಗಾಗಿ ಹೋರಾಡುತ್ತಿದ್ದಾರೆ. ಈಗ ಸಧ್ಯ ಹೆಚ್ ಆರ್ ಶ್ರೀನಾಥ ಕಾಂಗ್ರೆಸ್ ನಲ್ಲಿದ್ದಾರೆ. ಕಳೆದ ವರ್ಷ ಈ ದಿನಕ್ಕೆ ಅವರು ಜೆಡಿಎಸ್ ನಲ್ಲಿದ್ದರು. ಆದರೆ ಅವರು ಕಳೆದ ಆಗಷ್ಟ ತಿಂಗಳಲ್ಲಿ ಜೆಡಿಎಸ್ ತೋರೆದು ಕಾಂಗ್ರೆಸ್ ಪಕ್ಷವನ್ನು ಡಿ ಕೆ ಶಿವಕುಮಾರ ನೇತ್ರತ್ವದಲ್ಲಿ ಸೇರಿಕೊಂಡಿದ್ದಾರೆ.
ಈಗ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು. ತಮ್ಮದು ಹಾಗು ತಂದೆಯ ಪ್ರಭಾವ ಬಳಸಿಕೊಂಡು ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ.ಹೆಚ್ ಆರ್ ಚನ್ನಕೇಶವ ಮೊದಲಿನಿಂದಲೂ ಅಣ್ಣನೊಂದಿಗೆ ಒಂದೇ ಪಕ್ಷದಲ್ಲಿ ರಾಜಕೀಯ ಗುರುತಿಸಿಕೊಂಡಿರಲಿಲ್ಲ. ಈ ಹಿಂದೆ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಚನ್ನಕೇಶವ ಕಳೆದ ಚುನಾವಣೆಯ ಸಂದರ್ಭದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು.
ಹಾಲಿ ಶಾಸಕ ಪರಣ್ಣ ಮನವಳ್ಳಿಗೆ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಇರುವದರಿಂದ ಪಕ್ಷೇತರರಾಗಿಯಾದರೂ ಸ್ಪರ್ಧಿಸಬೇಕೆಂದು ವೇದಿಕೆ ಸಿದ್ದಪಡಿಸಿಕೊಂಡಿದ್ದರು.ಈ ಮಧ್ಯೆ ಹಳೆಯ ಆಪ್ತತೆಯ ಹಿನ್ನಲೆಯಲ್ಲಿ ಇತ್ತೀಚಿಗೆ ಕುಮಾರಸ್ವಾಮಿಯರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.