ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನಗರದ ವೈಭವ ಚಿತ್ರಮಂದಿರದಿಂದ ಶಾಸಕ ಸಿದ್ದು ಸವದಿ ಕಚೇರಿಗೆ ತಾಲೂಕಿನ ಆಶಾಕಾರ್ಯಕರ್ತೇಯರು ಪಾದಯಾತ್ರೆಯ ಮೂಲಕ ತೆರಳಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು.
ಚೂರುಪಾರು ಬಿಡಿಗಾಸು ಹಾಕುವ ಅಗತ್ಯವಿಲ್ಲ. ನಮಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಇಲ್ಲಿರುವ ಪ್ರತಿಯೊಬ್ಬವರು ಬಡಕುಟುಂಬಗಳಿಂದ ಬಂದಿದ್ದೆವೆ. ನಮಗೂ ಗಂಡ, ಮಕ್ಕಳು ಇರುವ ಸಂಸಾರವಿದೆ. ಪ್ರತಿವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ ಐದು ಸಾವಿರ ಸಂಭಾವನೆಯಲ್ಲಿ ಬದುಕುವುದಾದರು ಹೇಗೆ? ಜನವರಿಯಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ನಿಲ್ಲಿಸಿದ ಸರ್ಕಾರವು ತಮ್ಮ ಕಚ್ಚಾಟದಲ್ಲಿ ಭರವಸೆಯನ್ನು ಈಡೆರಿಸದೇ ನಿರ್ಲಕ್ಷಿಸಲಾಗುತ್ತಿದೆ.
ಪ್ರತಿ ಸರ್ವೇ ಸೇರಿದಂತೆ 24ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದವೆ. ರಾಜ್ಯ ನಾಯಕರೊಂದಿಗೆ ರಾಜ್ಯಾಧ್ಯಕ್ಷ ನಾಗಲಕ್ಷ್ಮಿ ನಿರಂತರ ಸಂಪರ್ಕದಲ್ಲಿದ್ದವೆ. ಕಾರಣ ನಮ್ಮ ಬೇಡಿಕೆಗಾಗಿ ನಮ್ಮ ಹೋರಾಟವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಶಾ ಸುಗಮಕಾರ. ಮಂಜುಳಾ ಸರಿಕರ, ರುಕ್ಷಾನಾ ನಾಗಟಾನ್, ಗಾಯತ್ರಿ ರಾವಳ. ಬೆಬಿಶ್ರಿ ಹಾಸಿಲಕರ, ಲಕ್ಷ್ಮೀ ತಳವಾರ, ರೂಪಾ ಶಿಂಗೆ, ಮಹಾನಂದ ಧರೆನ್ನವರ, ಶಿಲ್ಪಾ ಪತ್ತಾರ, ಜಯಶ್ರೀ ಘಂಟಿ, ಸುಜಾತಾ ಹೊಸುರ, ಗೀತಾ ಚಲವಾದಿ ಸೇರಿದಂತೆ ತಾಲೂಕಿನ ನೂರಾರು ಆಶಾಕಾರ್ಯಕರ್ತೇಯರು ಭಾಗಿಯಾಗಿದ್ದರು.