ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 6 ರಿಂದ ಶುರುವಾಗಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಹೊನಲು ಬೆಳಕಿನ ಟೆಸ್ಟ್ ಮ್ಯಾಚ್ ಎಂಬುದು ವಿಶೇಷ.
ಅದರಲ್ಲೂ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಎರಡು ಬದಲಾವಣೆ ಕಂಡು ಬರಲಿದೆ. ಏಕೆಂದರೆ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತ ತಂಡದ ಆಡುವ ಬಳಗದಲ್ಲಿ ಎರಡು ಬದಲಾವಣೆ ನಿರೀಕ್ಷಿಸಬಹುದು.
ಭಾರತ ತಂಡವನ್ನು ಕೂಡಿಕೊಳ್ಳಲಿರುವ ಗಂಭಿರ್ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿ ಪ್ಲೇಯಿಂಗ್ ಇಲೆವೆನ್ ಅಂತ್ಯಗೊಳಿಸಲಿದ್ದಾರೆ. ಅದರಂತೆ ದೇವದತ್ ಪಡಿಕ್ಕಲ್ ಜೊತೆ ಆಡುವ ಬಳಗದಿಂದ ಹೊರಬೀಳುವ ಮತ್ತೋರ್ವ ಆಟಗಾರ ಯಾರೆಂಬುದು ಇಂದು ನಿರ್ಧಾರವಾಗಲಿದೆ