ಮೈಸೂರು: ತಮಿಳುನಾಡು, ಕೇರಳ ಬಳಿಕ ಈಗ ಈ ಫೆಂಗಲ್ ಚಂಡಮಾರುತದ ಭೂತ ಕರ್ನಾಟಕಕ್ಕೂ ಕಾಲಿಟ್ಟಿದೆ. ಚಂಡಮಾರತದ ಪರಿಣಾಮ ರಾಜ್ಯದ ಹಲವೆಡೆ ಭಾರಿ ಮಳಡಯಾಗುತ್ತಿದೆ.
ಫೆಂಗಲ್ ಚಂಡಮಾರುತದ ಪರಿಣಾಮದಿಂದ ಚಾಮುಂಡಿ ಬೆಟ್ಟದಲ್ಲಿ ರಸ್ತೆಗೆ ಬಂಡೆಗಳು ಉರುಳಿವೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಬದಿಯ ಬೆಟ್ಟದ ಕಲ್ಲು ಬಂಡೆಗಳು ಜಾರಿ ರಸ್ತೆಗೆ ಬಿದ್ದಿವೆ.
ಚಾಮುಂಡಿ ಬೆಟ್ಟದ ಮುಖ್ಯ ರಸ್ತೆಗೆ ಬಂಡೆಗಳು ಉರುಳಿವೆ. ನಿರಂತರ ಮಳೆಗೆ ಮಣ್ಣು ಸಡಿಲಗೊಂಡ ಪರಿಣಾಮ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆಗುರುಳಿದ ಬಂಡೆಗಳಿಂದ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.