ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ:ಮೂಡಲಪಾಳ್ಯ ಜ್ಞಾನ ಸೌಧದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನವತಿಯಿಂದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 116ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಸಮಾರಂಭ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರತಿಮೆಗೆ ಬೇಲಿ ಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿರವರು ,
ವಸತಿ ಸಚಿವರಾದ ವಿ.ಸೋಮಣ್ಣರವರು, ಖ್ಯಾತ ವಿಜ್ಞಾನಿಗಳಾದ ಪದ್ಮಶ್ರೀ ಡಾ.ಎ.ಎಸ್.ಕಿರಣ್ ಕುಮಾರ್ ರವರು, ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ರವರು, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣರವರು, ಕನ್ನಡಪರ ಹೋರಾಟಗಾರ ಪಾಲನೇತ್ರ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ದಾಸೇಗೌಡರವರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ದೀಪಾ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಶಿವರುದ್ರ ಸ್ವಾಮೀಜಿಗಳು ಮಾತನಾಡಿ ಸಮಾಜದಲ್ಲಿ ಜ್ಞಾನದ ದೀಪಾವಾಗಿ, ಎಲ್ಲರು ಬಾಳಿಗೆ ಬೆಳಕಾಗಿ ನಿಂತವರು ಶ್ರೀ ಶಿವಕುಮಾರ ಸ್ವಾಮೀಜಿರವರು.ಮನುಷ್ಯ ಉತ್ತಮ ಪ್ರಜೆಯಾಗಿ ಬದುಕಲು ಗುರುಗಳ ಮಾರ್ಗದರ್ಶನ ಮುಖ್ಯ.ಪರಮಾತ್ಮ ಎಲ್ಲಿ ವಾಸ ಮಾಡುತ್ತಾನೆ ಎಂದರೆ ಎಲ್ಲರ ಭಕ್ತರ ಹೃದಯದಲ್ಲಿ.ಕಾಯಕ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೆ ಸಾರಿದರು.ಶ್ರಮದಿಂದ,ಬೆವರ ಹನಿಯಿಂದ ದುಡಿದ ಹಣದಲ್ಲಿ ಸ್ವಾಭಿಮಾನಿಯಾಗಿ ಬದುಕು ಸಾಗಿಸಬೇಕು ಎಂದು ಹೇಳಿದರು.
ಕಿರಣ್ ಕುಮಾರ್ ರವರು ಮಾತನಾಡಿ ಇಂದಿನ ಸಮಾಜ ಅತಿ ವೇಗವಾಗಿ ಬೆಳೆಯುತ್ತಿದೆ .ಮನುಷ್ಯ ತನ್ನ ಜೀವನ ಸಾಗಿಸಲು ಹಲವು ಶಕ್ತಿ,ಪೇರಣೆ ಬೇಕಾಗುತ್ತದೆ .ಅನ್ನ,ಶಿಕ್ಷಣ,ಆಶ್ರಯವನ್ನು ಸಮಾಜಕ್ಕೆ ನೀಡಿದ ಮಹಾನ್ ಸಂತ ಎಂದರೆ ಶ್ರೀ ಶಿವಕುಮಾರ್ ಮಹಾಸ್ವಾಮಿಜೀಯರವರು.ಶಾಂತಿ ,ಸೌಹರ್ದತೆಯಿಂದ ಬದುಕಲು ಮತ್ತು ಜೀವನ ಸಾಧನೆ ಮಾಡಲು ಶಿವಕುಮಾರ ಸ್ವಾಮೀಜಿರವರ ಆದರ್ಶಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಸಿ.ಎನ್.ಮಂಜುನಾಥ್ ರವರು ಮಾತನಾಡಿ ಹೃದಯ ಎಂದು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ವಿಶ್ರಾಂತಿ ಹೃದಯ ಪಡೆದರೆ ಜೀವನ ಅಂತ್ಯವಾದದಂತೆ.ಶ್ರೀ ಶಿವಕುಮಾರ ಸ್ವಾಮೀಜಿ ರವರು ಮಾಡಿದ ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ.ಶಿಕ್ಷಣದ ಮೂಲಕ ಸಂಸ್ಕಾರ, ಮಾನವೀಯತೆ ಮತ್ತು ಜ್ಞಾನದ ಮೂಲಕ ಸಮಾಜದ ಮೇಲೆ ಬೆಳಕು ಚಲ್ಲುವ ಕಾರ್ಯವನ್ನು ಸ್ವಾಮೀಜಿ ಮಾಡಿದರು.ಮನುಷ್ಯನ ಎಂದರೆ ಪರೋಪಕಾರಿ ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗಿ ಮನುಷ್ಯರ ಸಂಖ್ಯೆ ಹೆಚ್ಚಾಗಬೇಕು.
ನಾವು ಮಾಡುವ ಕೆಲಸ ಇಬ್ಬರಿಗೂ ಮಾತ್ರ ತಿಳಿಯುತ್ತದೆ ಒಂದು ಪರಮಾತ್ಮ ಮತ್ತು ಇನ್ನೂಂದು ನಮ್ಮಲ್ಲಿರ ಆತ್ಮಕ್ಕೆ.ನಮ್ಮ ಆತ್ಮತೃಪ್ತಿಯಿಂದ ಕೆಲಸ ಮಾಡಬೇಕು. ಸಂತರು, ಗುರುಗಳ ಆಶೀರ್ವಾದ ಇರಬೇಕು ಆಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.ಮಕ್ಕಳಿಗೆ ಅಂಕಗಳ ಮೇಲೆ ಬೆಳಸಬಾರದು, ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ.ಸಕ್ಕರೆ ಖಾಯಿಲೆ, ರಕ್ತಒತ್ತಡ ಮತ್ತು ಕ್ಯಾನ್ಸರ್ ರೋಗಿಗಳ ದೇಶವಾಗಿದೆ.ಬೆಳಗ್ಗೆ ಶಾಲೆಗಳನ್ನು 10ಗಂಟೆ ಪ್ರಾರಂಭ ಮಾಡಬೇಕು ಮಕ್ಕಳು ಮತ್ತು ತಂದೆ,ತಾಯಿಂದರಿಗೆ ಒತ್ತಡ ಕಡಿಮೆ ಮಾಡಬೇಕು.
ಅವಿಭಕ್ತ ಕುಟುಂಬಗಳ ವಿಭಜನೆಯಿಂದ ಹಲವಾರು ಸಮಸ್ಯೆ ಮತ್ತು ರೋಗಗಳಿಗೆ ರಹದಾರಿಯಾಗಿದೆ.ಮನುಷ್ಯ ಶಾಂತಿಯುತ ಜೀವನ ಸಾಗಿಸಬೇಕು, ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡಿ . ಜೀವನದಲ್ಲಿ ಕಾಲೇಜಿನ ಪದವಿ ಜೊತೆಯಲ್ಲಿ ಬದುಕಿನ ಪದವಿ ಪಡೆದುಕೊಳ್ಳಿ ಎಂದು ಹೇಳಿದರು.ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಡಾ.ಎಸ್.ರಾಜು, ಮೋಹನ್ ಕುಮಾರ್, ಶ್ರೀಮತಿ ರೂಪ ಲಿಂಗೇಶ್ವರ್,ಬಿಜೆಪಿ ಮುಖಂಡರುಗಳಾದ ರಾಜಪ್ಪ, ಶ್ರೀಧರ್ ರವರು ಶಿವಕುಮಾರ ಮಹಾಸ್ವಾಮೀಜಿಗಳ ಭಕ್ತವೃಂದದವರು ಪಾಲ್ಗೊಂಡಿದ್ದರು.