ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕ ಗುರಿಗಳಿರುತ್ತವೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಹೀಗೆ ಹಲವು ಅಗತ್ಯಗಳಿಗಾಗಿ ಹಣ ಉಳಿಸುತ್ತಾರೆ.
ಆದರೆ ಅನೇಕ ಜನರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಣವನ್ನು ಉಳಿಸಲು ಆಸಕ್ತಿ ಹೊಂದಿರುವುದಿಲ್ಲ. ಯುವ ವೃತ್ತಿಪರರು ಹೆಚ್ಚಾಗಿ ತಮ್ಮ 30 ಅಥವಾ 40 ವರ್ಷಗಳವರೆಗೆ ಜೀವನವನ್ನು ಆನಂದಿಸಲು ಬಯಸುತ್ತಾರೆ. ನಂತರ ಉಳಿತಾಯಕ್ಕಾಗಿ ಯೋಜಿಸುತ್ತಾರೆ. ಹೀಗೆ ಯೋಚಿಸುವುದರಿಂದ ಅನೇಕ ಪ್ರಯೋಜನಗಳು ನಷ್ಟವಾಗುತ್ತವೆ.
ಆದರೆ ನೆನಪಿಡಿ ಸಂಬಳ ಎಷ್ಟೇ ಬರಲಿ ಅದರಲ್ಲಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಉಳಿತಾಯ ಮಾಡಲೇ ಬೇಕು. ಯಾವಾಗ, ಯಾವ ರೀತಿಯಲ್ಲಿ ಅಪಾಯ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.
ಹೀಗಾಗಿ ಸಂಬಳ ಕೈಗೆ ಸಿಗಲು ಆರಂಭಿಸಿದ ದಿನದಿಂದ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಕೈಗೆ ಸಿಗುವುದೇ ಇಷ್ಟು ಸಣ್ಣ ಮೊತ್ತ. ಇದರಲ್ಲಿ ಉಳಿತಾಯ ಮಾಡುವುದಾದರೂ ಹೇಗೆ? ಎನ್ನುವುದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ.