ಮೆಗಾ ಆಕ್ಷನ್ನಲ್ಲಿ ಚಾಣಕ್ಷತನ ತೋರಿದ್ದು RCB ಸ್ಟ್ರಾಟಜಿ ಬಗ್ಗೆ ದಿಗ್ಗಜ ಬಿಚ್ಚಿಟ್ಟಿದ್ದಾರೆ. ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಎಲ್ಲಾ ಐಪಿಎಲ್ ತಂಡಗಳು ಸೇರಿ ಒಟ್ಟು 182 ಆಟಗಾರರಿಗೆ ಬರೋಬ್ಬರಿ 640 ಕೋಟಿ ಸುರಿದಿವೆ.
ಐಪಿಎಲ್ ಕಪ್ ಗೆಲ್ಲುವಲ್ಲಿ ಎಡವಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಬಲಷ್ಠ ತಂಡ ಕಟ್ಟಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಟಾರ್ ಆಟಗಾರರ ಹಿಂದೆ ಬೀಳದೆ ತಂಡಕ್ಕೆ ಅಗತ್ಯ ಇರೋ ಪ್ಲೇಯರ್ಸ್ ಖರೀದಿ ಮಾಡಿದೆ. ಈ ಮೂಲಕ ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟಿದೆ. ಈ ಬಗ್ಗೆ ಈಗ ಟೀಮ್ ಇಂಡಿಯಾದ ದಿಗ್ಗಜ ಸುನೀಲ್ ಗವಾಸ್ಕರ್ ಮಾತಾಡಿದ್ದಾರೆ.
ಈ ಹಿಂದೆ ಸ್ಟಾರ್ಗಳನ್ನೇ ನೆಚ್ಚಿಕೊಂಡು ಪ್ರಶಸ್ತಿ ಗೆಲ್ಲಲು ಮುಂದಾಗಿದ್ದ ಆರ್ಸಿಬಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ತನ್ನ ಪ್ಲಾನ್ ಅನ್ನೇ ಬದಲಿಸಿದೆ. ಅಗ್ರೆಸ್ಸಿವ್ ಆಗಿ ವರ್ತಿಸದೆ ಬರೋಬ್ಬರಿ 75 ಲಕ್ಷ ಜತೆಗೆ ಎರಡೂ RTM ಉಳಿಸಿಕೊಂಡು ಸಂಯಮದಿಂದ ಹರಾಜನ್ನು ಮುಕ್ತಾಯಗೊಳಿಸಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಆರ್ಟಿಎಂನಲ್ಲಿ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿಲ್ ಜಾಕ್ಸ್ ಅವರನ್ನು ಆರ್ಸಿಬಿ ಪಡೆಯಲಿಲ್ಲ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆದರೆ ಆರ್ಸಿಬಿ ಹರಾಜಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ ಎಂದರು