ಟಾಲಿವುಡ್ ನಟ ಮೋಹನ್ ಬಾಬು ಕುಟುಂಬದಲ್ಲಿ ಹಲವು ವರ್ಷಗಳಿಂದ ಮನಸ್ತಾಪ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಇದು ಅತಿರೇಕಕ್ಕೆ ಹೋಗಿದ್ದು ಇತ್ತೀಚೆಗೆ ಅವರ ವಿರುದ್ಧ ಎರಡನೇ ಮಗ ದೂರುದ ದಾಖಲಿಸಿದ್ದಾರೆ. ಈ ಬಗ್ಗೆ ಸುದ್ದಿಯಾಗಿದ್ದು ಇದನ್ನು ವರದಿ ಮಾಡಲು ತೆರಳಿದ್ದ ವರದಿಗಾರರ ಮೇಲೆ ಮೋಹನ್ ಬಾಭು ಹಲ್ಲೆ ಮಾಡಿದ್ದಾರೆ.
ಮೋಹನ್ ಬಾಬು ಕುಟುಂಬದ ಸುದ್ದಿಯನ್ನು ವರದಿ ಮಾಡಲು ತೆರಳಿದ್ದ ವರದಿಗಾರನಿಗೆ ಮೋಹನ್ ಬಾಬು ಹೈದರಾಬಾದ್ನ ಮಂಚುಟೌನ್ನ ಜಲ್ಲಪಲ್ಲಿ ಬಳಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ವಾಹಿನಿಯ ಲೋಗೋ ಕುತ್ತಿಕೊಂಡಿದ್ದು ಅದರಲ್ಲೇ ವರದಿಗಾರನಿಗೆ ಹಲ್ಲೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಮೋಹನ್ ಬಾಬು ಬಳಿಯಿದ್ದ ಪರವಾನಗಿಯುಳ್ಳ ಗನ್ ಸೀಜ್ ಮಾಡಲಾಗಿದೆ. ಮೋಹನ್ ಬಾಬು, ಪುತ್ರ ವಿಷ್ಣು ಅವರಿಗೆ ಸೇರಿದ ಗನ್ಗಳನ್ನು ಹೈದರಾಬಾದ್ ಪೊಲೀಸರು ಜಪ್ತಿ ಮಾಡಿದ್ದಾರೆ. ಜಲಪಲ್ಲಿಯ ಮೋಹನ್ ಬಾಬು ಮನೆಯಲ್ಲಿ ಹೈಡ್ರಾಮಾ ನಡೆದಿದೆ. ಮನೋಜ್ ಮನೆಗೆ ಬರದಂತೆ ಸಿಬ್ಬಂದಿ ತಡೆದಿದ್ದಾರೆ.
ಮನೋಜ್ ಮತ್ತು ಮೌನಿಕಾ ಗೇಟುಗಳನ್ನು ಮುರಿದು ಒಳಹೋದರು. ಸುಮಾರು 70 ಬೌನ್ಸರ್ಗಳನ್ನು ನಿಯೋಜಿಸಿದ್ದರು. ಸ್ಥಳದಲ್ಲಿ ಪೊಲೀಸರು ಕೂಡ ಇದ್ದಾರೆ. ಮೋಹನ್ ಬಾಬು ಮನೆಯಲ್ಲಿ ಏನಾಗುತ್ತಿದೆ ಎನ್ನುವುದು ಸಸ್ಪೆನ್ಸ್ ಆಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮೋಹನ್ ಬಾಬು ಅವರು ಹಲ್ಲೆಗೆ ಮುಂದಾಗಿದ್ದಾರೆ.
ಜಲಪಲ್ಲಿಯಲ್ಲಿರುವ ಮೋಹನ್ ಬಾಬು ನಿವಾಸದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ತೆಲಂಗಾಣ ಎಡಿಜಿಪಿ ಅವರನ್ನು ಭೇಟಿಯಾದ ನಂತರ ಮನೋಜ್ ದಂಪತಿ ನಿವಾಸಕ್ಕೆ ಆಗಮಿಸಿದಾಗ ಭದ್ರತಾ ಸಿಬ್ಬಂದಿ ತಡೆದರು. ಅವರು ಗೇಟ್ಗಳನ್ನು ಒಡೆದು ಒಳಗೆ ಪ್ರವೇಶಿಸಿದರು. ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಗಳು ಮನೆಯಲ್ಲೇ ಇದ್ದಾಳೆ ಎಂದು ಮನೋಜ್ ಆತಂಕ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ಗೇಟ್ ತೆರೆಯದ ಕಾರಣ ಅವರು ಸ್ವಲ್ಪ ಹೊತ್ತು ಕಾರಿನಲ್ಲಿಯೇ ಇದ್ದರು. ನಂತರ ಅವರು ಗೇಟ್ಗಳನ್ನು ತಳ್ಳಿಕೊಂಡು =ಬಲವಂತವಾಗಿ ಒಳಗೆ ನುಗ್ಗಿದರು.