ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ ಎಂದು SM ಕೃಷ್ಣ ನೆನೆದು ನಟಿ ರಮ್ಯಾ ಭಾವುಕ ಪೋಸ್ಟ್ ಹಾಕಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ರಮ್ಯಾ, ʻʻಒಬ್ಬ ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು… ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು… ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್ಫ್ರೆಂಡ್ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್ ಎಮೊಜಿ ಹಾಕಿದ್ದಾರೆ.
ಇನ್ನೂ ಸಿನಿಮಾ ರಂಗದಲ್ಲಿದ್ದ ರಮ್ಯಾ ಅವರನ್ನು ರಾಜಕಾರಣಕ್ಕೆ ಕರೆತಂದಿದ್ದೇ ಎಸ್ಎಂಕೆ. ಈ ಕಾರಣದಿಂದ ಹಲವಾರು ಬಾರಿ ರಮ್ಯಾ ಅವರು ಎಸ್ಎಂಕೆ ನಿವಾಸಕ್ಕೆ ತೆರಳಿ ಮಾತನಾಡಿ ಸಲಹೆಗಳನ್ನು ಪಡೆಯುತ್ತಿದ್ದರು. ಎಸ್.ಎಂ ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟ ರಮ್ಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್ನಿಂದಾಗಿ ಹೈಕಮಾಂಡ್ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡಿದ್ದರು.