ಮಂಡ್ಯ: ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಕಾಫಿ ಡೇ ಆವರಣದಲ್ಲಿ ಸಂಜೆ 4 ಗಂಟೆಯ ನಂತರ ಅಂತ್ಯಸಂಸ್ಕಾರ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೀತಿವೆ. ಇನ್ನೂ ಎಸ್ ಎಂ ಕೃಷ್ಣ ಅವರ ಚಿತೆಗೆ ಮೊಮ್ಮಗ, ಡಿಸಿಎಂ ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ಥ್ಯ ಸಿದ್ದಾರ್ಥ್ ಅಗ್ನಿಸ್ಪರ್ಶ ಮಾಡಲಿದ್ದಾರೆ.
ಇನ್ನೂ ಅಂತ್ಯಸಂಸ್ಕಾರಕ್ಕೆ ಒಂದು ಸಾವಿರ ಕೆಜಿ ಗಂಧದ ಕಟ್ಟಿಗೆಗಳನ್ನು ಬಳಸಲಾಗುತ್ತಿದೆ. ಶ್ರೀಗಂಧದ ಮೂಲಕ ಅಗ್ನಿ ಸ್ಪರ್ಶಕ್ಕೆ ನೀಡಲಾಗುತ್ತಿದೆ. ಶ್ರಗಂಧದ ಬೆಳೆಯನ್ನು ರೈತರು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಕೃಷ್ಣರವರು. ಹೀಗಾಗಿ ಒಂದು ಸಾವಿರ ಕೆಜಿ ಗಂಧದ ಕಟ್ಟಿಗೆಯಲ್ಲಿ ಅಂತಿಮಸಂಸ್ಕಾರ ಮಾಡಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.