ಬೆಳಗಾವಿ: ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ಬರ್ತಿದೆ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, 2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯ ಹೋರಾ ನಡೆಸುತ್ತಿದೆ.
ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ. ಹನ್ನೆರಡು ಜಿಲ್ಲೆಯಲ್ಲಿ ಹೋರಾಟ ಮಾಡಿದಾಗ ಯಾವುದೇ ದೌರ್ಬಲ್ಯ ಆಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದನೆ ಮಾಡಿಲ್ಲ.
ಸುವರ್ಣ ಸೌಧ ಬಳಿ ನ್ಯಾಯ ಕೇಳಬೇಕು ಎಂದು ಉಗ್ರ ಹೋರಾಟ ಮಾಡಿದ್ವಿ. ಆದರೆ ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ನೀಡುತ್ತಿದೆ. ರ್ಯಾಲಿಗೆ ಬರುವ ಟ್ರ್ಯಾಕ್ಟರ್ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊಡಸಿದ್ರು. ಕೊಂಡಸಕೊಪ್ಪ ಬಳಿ ರ್ಯಾಲಿ ಮಾಡಿ ಸಿಎಂ ಸಿದ್ದರಾಮಯ್ಯ ಒತ್ತಡ ತರಲು ಪ್ರಯತ್ನ ಮಾಡಿದೆವು.
ಮೂವರು ಸಚಿವರು ಒಳ್ಳೆಯ ಮಾತು ಹೇಳಿದ್ರೆ ಮುಗಿತ್ತಿತ್ತು. ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಎಂದ್ರು. ಮಹಾದೇವಪ್ಪನವರು 10 ಜನ ಬನ್ನಿ ಎಂದ್ರು ಹೇಳಿದ್ರು ಹೋಗತ್ತಾ ಇದ್ವಿ. ಜನರು ಸಿಎಂ ಸಿದ್ದರಾಮಯ್ಯ ಅವರೇ ಬರಬೇಕು ಅಂದ್ರು. ಸಿಎಂ ಬರಲ್ಲ ಎಂದು ಎಡಿಜಿಪಿ ಹೇಳಿದ್ರು. ಸಿಎಂ ಇದ್ದ ಜಾಗಕ್ಕೆ ಹೋಗೊಣ ಎಂದು ನಾವು ತೀರ್ಮಾನ ಮಾಡಿದೆವು. ಸಿವಿಲ್ ಬಟ್ಟೆಯಲ್ಲಿ ಇದ್ದ ಕೆಲವರು ಕಲ್ಲು ತೂರಾಟ ಮಾಡಿದ್ರು. ಪೊಲೀಸರು ದ್ವೇಷದಿಂದ ಮಾರಣಾಂತಿಕ ಹಲ್ಲೆ ಮಾಡಿದ್ರು, ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಯಾವ ಸಿಎಂ ಸಹ ಮಾರಣಾಂತಿಕ ಹಲ್ಲೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂತಹ ಲಿಂಗಾಯತ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮ ಸಮಾಜದ ಶಾಸಕರನ್ನು ಟಾರ್ಗೆಟ್ ಮಾಡೋದು.ಮೀಸಲಾತಿ ಕೊಡಲು ಆಗಲ್ಲ ಎಂದು ಹೇಳಿದ್ರೆ, ನಾವು ಬೇರೆ ಮಾರ್ಗ ಹಿಡಿಯುತ್ತೇವೆ. ಸಿದ್ದರಾಮಯ್ಯ ಜಾಣ ಮುಖ್ಯಮಂತ್ರಿ ಇದ್ದಾರೆ.