ಎರಡನೇ ಪಟ್ಟಿ ಬಿಡುಗಡೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಗೊಂದಲ ಶುರುವಾಗಿದೆ..ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ..ಇದು ಹಿರಿಯ ನಾಯಕರಿಗೆ ತಲೆನೋವು ತಂದಿಟ್ಟಿದೆ..ತೀರ್ವ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳನ್ನ ಕರೆದು ಸಮಾಧಾನ ಮಾಡುವ ಪ್ರಯತ್ನ ನಡೆದಿವೆ..ಕೆಲವನ್ನ ಸಮಾಧಾನ ಪಡಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ..
ಕಾಂಗ್ರೆಸ್ ೧೨೪ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದೆ..ಎರಡನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ..ಎರಡು ಬಾರಿ ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆಯನ್ನ ನಡೆಸಲಾಗಿದೆ..ಆದ್ರೂ ಕೆಲವು ಕ್ಷೇತ್ರಗಳಲ್ಲಿ ಕಠಿಣ ಸ್ಪರ್ಧಿಗಳ ನಡುವೆ ಟಿಕೆಟ್ ಫೈಟ್ ಶುರುವಾಗಿದೆ..ಇಂತ ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ನಾಯಕರಿಗೆ ತಲೆ ನೋವು ತಂದಿಟ್ಟಿದೆ..ಹಾಗಾಗಿ ಪಟ್ಟಿ ಬಿಡುಗಡೆಗೂ ಮುನ್ನವೇ ಪ್ರಬಲರನ್ನ ಕರೆದು ಸಂಧಾನ ಮಾಡುವ ಪ್ರಕ್ರಿಯೆ ನಡೆದಿದೆ..
ಯಸ್..ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ನಡುವೆ ಟಿಕೆಟ್ ಫೈಟ್ ಜೋರಾಗಿತ್ತು..ಕಿಮ್ಮನೆ ಪರ ಸಿದ್ದು ನಿಂತ್ರೆ,ಮಂಜುನಾಥ್ ಪರ ಡಿಕೆಶಿ ಬ್ಯಾಟಿಂಗ್ ನಡೆಸಿದ್ದರು..ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಇಬ್ಬರ ಪರ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ರು..ಹಾಗಾಗಿ ಟಿಕೆಟ್ ಯಾರಿಗೆ ನೀಡಬೇಕೆಂಬ ಗೊಂದಲ ಹಾಗೇ ಮುಂದುವರಿದಿತ್ತು..ಆಕಾಂಕ್ಷಿಗಳ ನಡುವೆಯೂ ಕೋಲ್ಡ್ ವಾರ್ ಮುಂದುವರಿದಿತ್ತು..ಹಾಗಾಗಿ ಕಿಮ್ಮನೆ ಹಾಗೂ ಮಂಜುನಾಥ್ ಗೌಡರನ್ನ ಕರೆದು ಸಮಾಧಾನ ಪಡಿಸುವ ಕೆಲಸ ಡಿಕೆಶಿ ಮಾಡಿದ್ರು..ಆದ್ರೂ ಅದುಬಗೆಹರಿದಂತೆ ಕಾಣ್ತಿಲ್ಲ..
ಒಟ್ನಳ್ಳಿ ಕಗ್ಗಂಟಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಅಸಮಾಧಾನ ಬಗೆಹರಿಸುವ ಪ್ರಯತ್ನ ನಾಯಕರು ಮಾಡಿದ್ದಾರೆ..ತೀರ್ಥಹಳ್ಳಿ,ವಿಜಯಪುರನಗರ ಹಾಗೂ ನರಗುಂದ,ನವಲಗುಂದ ಟಿಕೆಟ್ ಬಗ್ಗೆ ಗೊಂದಲಕ್ಕೆ ಬ್ರೇಕ್ ಬಿದ್ದಿದೆ..ಪ್ರಮುಖರಿಗೆ ಟಿಕೆಟ್ ನೀಡುವ ಮೂಲಕ ನಿರ್ಧಾರಕ್ಕೆ ನಾಯಕರು ಬಂದಿದ್ದಾರೆ..ಇದನ್ನ ಹೈಕಮಾಂಡ್ ಪುರಸ್ಕರಿಸಬೇಕಿದೆ..