ಚಾಮರಾಜನಗರ:- ಇಲ್ಲಿನ ಕೊಳ್ಳೇಗಾಲ ಹನೂರು ಮುಖ್ಯರಸ್ತೆಯಲ್ಲಿನ ಲೊಕ್ಕನಹಳ್ಳಿ ಬಳಿ ನಾಲ್ಕು ಹುಲಿ ಉಗುರುಗಳನ್ನು ಬೈಕಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹರವೆ ಗ್ರಾಮದ
ನವೀನ್ ಕುಮಾರ್ ಬಿನ್ ಮಂಜು, (24), ಹೆಚ್.ಡಿ ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಕುಮಾರನಾಯಕ ಬಿನ್ ಚೆಲುವನಾಯಕ, (32) ಎಂಬಾತರೆ ಬಂಧಿರಾಗಿದ್ದಾರೆ.
ಘಟನೆ ವಿವರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯಿಂದ ಲೊಕ್ಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ಹುಲಿಯ 04 ಉಗುರುಗಳನ್ನು ಬೈಕಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್ ಎಸ್ ಕಾಶಿ ಪೊಲೀಸ್ ಅಧೀಕ್ಷಕರು ಸಿಐಡಿ ಅರಣ್ಯ ಸಂಚಾರಿ ಘಟಕ ಮಡಕೇರಿ ರವರ ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯ ಸಂಚಾರಿ ದಳ ಕೊಳ್ಳೇಗಾಲದ ಪಿಎಸ್ಐ ವಿಜಯ್ ರಾಜ್ ನೇತ್ರತ್ವದ ತಂಡ ಧಾಳಿ ನಡೆಸಿದೆ. ಈ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಕೂಡಲೆ ಹುಲಿ ಉಗುರನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿ ವನ್ಯಜೀವಿ ಸಂರಕ್ಷಾಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ
ಕಾರ್ಯಚರಣೆಯಲ್ಲಿ
ಅರಣ್ಯಸಂಚಾರಿ ಧಳದ ಸಿಬ್ಬಂದಿಗಳಾದ ಶಂಕರ್ ಬಸವರಾಜು ರಾಮಚಂದ್ರ ಸ್ವಾಮಿ ಲತಾ ಬಸವರಾಜು ಚಾಲಕ ಪ್ರಭಾಕರ್ ಭಾಗವಹಿಸಿದ್ದರು.