ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಸಣ್ಣ ಪುಟ್ಟ ವಿಚಾರಕ್ಕೂ ಡಿವೋರ್ಸ್ ಪಡೆದು ಗಂಡ ಹೆಂಡತಿ ಸಂಬಂಧಕ್ಕೆ ಎಳ್ಳು ನೀರು ಬಿಡುತ್ತಾರೆ.
ಗಂಡ-ಹೆಂಡತಿ ಬೇರೆ ಬೇರೆ ಹಾಸಿಗೆಗಳ ಮೇಲೆ ಮಲಗಿದರೆ ಅದರಿಂದ ಅವರಿಗೆ ಅನೇಕ ಪ್ರಯೋಜನಗಳಿವೆ. 4 ಜೋಡಿಗಳಲ್ಲಿ 1 ದಂಪತಿಗಳು ವಿಭಿನ್ನ ಹಾಸಿಗೆಗಳ ಮೇಲೆ ಮಲಗುತ್ತಾರೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. 2017 ರಲ್ಲಿ ನ್ಯಾಷನಲ್ ಸ್ಲಿಪ್ ಫೌಂಡೇಶನ್ನ ಸಮೀಕ್ಷೆಯು ವಿವಿಧ ಹಾಸಿಗೆಗಳ ಮೇಲೆ ಮಲಗುವವರು ಎಂದು ಹೇಳುತ್ತದೆ. ಅವರ ನಡುವಿನ ಬಾಂಧವ್ಯ ಉತ್ತಮವಾಗುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ. ಅಂತಹ ಜನರು ತಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ. ಅವರ ಜೀವನವು ಇತರ ಜನರ ಜೀವನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
ಈ ನಡುವೆ ಸಂಬಂಧವನ್ನು ಬಲಪಡಿಸುವ ವಿಶೇಷ ಡಿವೋರ್ಸ್ ಪ್ರವೃತ್ತಿಯೊಂದು ಟ್ರೆಂಡ್ ಆಗುತ್ತಿದೆ. ಏನಿದು ಸ್ಲೀಪ್ ಡಿವೋರ್ಸ್? ಈ ನಿದ್ರೆಯ ವಿಚ್ಛೇದನ ನಿಜಕ್ಕೂ ಗಂಡ ಹೆಂಡತಿಯ ಸಂಬಂಧವನ್ನು ಬಲಪಡಿಸುತ್ತದೆಯೇ ಅಥವಾ ಇದು ದಂಪತಿಗಳ ನಡುವೆ ಬಿರುಕು ಮೂಡುವಂತೆ ಮಾಡುತ್ತದೆಯೇ ಎಂಬುದನ್ನು ತಜ್ಞರು ವಿವರಿಸಿದ್ದಾರೆ.
ಉತ್ತಮ ನಿದ್ರೆಗಾಗಿ ಸಂಗಾತಿಗಳು ಬೇರೆ ಬೇರೆ ಕೋಣೆಗಳಲ್ಲಿ ಪ್ರತ್ಯೇಕವಾಗಿ ಮಲಗುವುದೇ ಸ್ಲೀಪ್ ಡಿವೋರ್ಸ್. ಸಾಮಾನ್ಯವಾಗಿ ದಂಪತಿಗಳು ಒಂದೇ ಕೋಣೆಯಲ್ಲಿ ಒಟ್ಟಿಗೆ ಮಲಗುತ್ತಾರೆ. ಆದ್ರೆ ಈ ಸ್ಲೀಪ್ ಡಿವೋರ್ಸ್ ಪ್ರವೃತ್ತಿಯಲ್ಲಿ ಗಂಡ-ಹೆಂಡತಿ ಬೇರೆ ಬೇರೆ ಮಲಗುತ್ತಾರೆ. ಯಾವುದೇ ಡಿಸ್ಟರ್ಬ್ ಇಲ್ಲದೆ ಉತ್ತಮ ನಿದ್ರೆಯನ್ನು ಪಡೆಯುವುದು ಸ್ಲೀಪ್ ಡಿವೋರ್ಸ್ನ ಮೂಲ ಉದ್ದೇಶವಾಗಿದೆ. ಇಲ್ಲಿ ದಂಪತಿಗಳು ದೈಹಿಕವಾಗಿ ಬೇರೆಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಜೊತೆಯಾಗಿರುತ್ತಾರೆ.
ಹಿಲ್ಟನ್ 2025 ಟ್ರೆಂಡ್ಸ್ ವರದಿಯ ಪ್ರಕಾರ, ದಂಪತಿಗಳು ರಜೆಯಲ್ಲಿರುವಾಗ ಮತ್ತು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನಿದ್ರೆಯ ವಿಚ್ಛೇದನವನ್ನು ಸ್ವೀಕರಿಸುತ್ತಿದ್ದಾರೆ. ವಿಶೇಷವಾಗಿ ದಂಪತಿಗಳು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಹೋಟೆಲ್ಗಳಲ್ಲಿ ಎರಡು ಪ್ರತ್ಯೇಕ ರೂಮ್ಗಳನ್ನು ಬುಕ್ ಮಾಡಿ, ನೆಮ್ಮದಿಯ ನಿದ್ರೆಗಾಗಿ ಮತ್ತು ಪರ್ಸನಲ್ ಸ್ಪೇಸ್ ಸಲುವಾಗಿ ಪ್ರತ್ಯೇಕವಾಗಿ ಮಲಗುತ್ತಿದ್ದಾರೆ.
ನಿದ್ರೆಯ ಸಮಸ್ಯೆಗಳಿಂದ ದೂರವಿರಲು ಉದಾಹರಣೆಗೆ ಗೊರಕೆಯಿಂದ, ಮಧ್ಯೆ ಮಧ್ಯೆ ಎಚ್ಚರಗೊಂಡು ಲೈಟ್ ಆನ್ ಮಾಡಿದಾಗ, ನಿದ್ರೆಯಲ್ಲಿ ಹೊರಳಾಡಿದಾಗ ಸಂಗಾತಿಯ ನಿದ್ರೆಯು ಹಾಳಾಗುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿದ್ದು, ಒಬ್ಬಂಟಿಯಾಗಿ ನೆಮ್ಮದಿಯಿಂದ ನಿದ್ರೆ ಮಾಡಲು ದಂಪತಿಗಳು ಹೆಚ್ಚಾಗಿ ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.
ಅಮೆರಿಕದಲ್ಲಿ ದಂಪತಿಗಳು ಹೆಚ್ಚಾಗಿ ಪ್ರತ್ಯೇಕವಾಗಿ ಮಲಗಲು ಆದ್ಯತೆ ನೀಡುತ್ತಿದ್ದಾರೆ ಎಂದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ. ಅಮೆರಿಕನ್ ಸ್ಲೀಪ್ ಮೆಡಿಸನ್ ಸಂಸ್ಥೆಯ ವಕ್ತಾರ ಡಾ. ಸೀಮಾ ಖೋಸ್ಲಾ “ಕಡಿಮೆ ನಿದ್ರೆಯು ಮನಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಇದು ಸಂಗಾತಿಯೊಂದಿಗೆ ವಾಗ್ವಾದ, ಜಗಳವನ್ನು ಮಾಡಿಸು ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ರಾತ್ರಿಯ ನಿದ್ರೆಯು ಆರೋಗ್ಯ ಹಾಗೂ ಸಂತೋಷ ಎರಡಕ್ಕೂ ತುಂಬಾನೇ ಮುಖ್ಯ ಆದ್ದರಿಂದ ಸಂಬಂಧದ ದೃಷ್ಟಿಯಿಂದ ಸ್ಲೀಪ್ ಡಿವೋರ್ಸ್ ಒಳ್ಳೆಯದು” ಎಂದು ಹೇಳಿದ್ದಾರೆ.