ನಿದ್ದೆ ಮಾಡುವ ಮೊದಲು ಕೆಲವರಿಗೆ ಹಾಸಿಗೆ ಸಮೀಪದಲ್ಲಿ ನಿಂಬೆ ಹಣ್ಣು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದನ್ನು ನೋಡುವಾಗ ತಮಾಷೆ ಎಂದು ಕಾಣಬಹುದು. ಆದರೆ ಈ ರೀತಿ ಮಾಡುವುದರಿಂದ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ.
ನಿಂಬೆಯ ಪರಿಮಳ ಮೈಂಡ್ ರಿಫ್ರೆಶ್ ಮಾಡುತ್ತದೆ. ಹೀಗೆ ನಾನಾ ಪ್ರಯೋಜನಗಳನ್ನು ಒದಗಿಸುವ ನಿಂಬೆಯನ್ನು ಸ್ಲೈಸ್ ಮಾಡಿ, ಅದರ ಮೇಲೆ ಉಪ್ಪನ್ನು ಸಿಂಪಡಿಸಿ, ರಾತ್ರಿ ಹೊತ್ತು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂದು ನಿಮಗೆ ತಿಳಿದಿದ್ಯಾ?
ಹೌದು, ಈ ವಿಚಾರ ನಿಮಗೆ ಕೊಂಚ ವಿಚಿತ್ರ ಎನಿಸಬಹುದು. ಆದರೂ ನಿಂಬೆ ಸ್ಟೈಸ್ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ, ರಾತ್ರಿ ಹೊತ್ತು ನಿಮ್ಮ ಹಾಸಿಗೆಯ ಬಳಿ ಇಟ್ಟುಕೊಂಡು ಮಲಗುವುದರಿಂದಾಗುವ ಚಮತ್ಕಾರವನ್ನು ನೀವೇ ಕಾಣುತ್ತೀರಿ. ಇದು ನಿಮ್ಮ ಆರೋಗ್ಯ ಮತ್ತು ಮನಸ್ಸನ್ನು ಆರೋಗ್ಯಕರವಾಗಿಡಲು ಸರಳವಾದ ತಂತ್ರವಾಗಿದೆ. ಹಾಗಾದರೆ ಈ ರೀತಿ ಮಾಡುವುದರಿಂದ ಮತ್ತಷ್ಟು ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂಬುವುದನ್ನು ತಿಳಿಯೋಣ ಬನ್ನಿ
ಕಟ್ಟಿದ ಮೂಗಿನಿಂದ ಪರಿಹಾರ: ನೀವು ಮಲಗುವ ಮುನ್ನ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಕತ್ತರಿಸಿದ ನಿಂಬೆ ಹಣ್ಣನ್ನು ಇಟ್ಟುಕೊಂಡು ಮಲಗುವುದು ನಿಮಗೆ ಉತ್ತಮವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ನಿಂಬೆಯು ಹೇರಳವಾದ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕಟ್ಟಿಕೊಂಡ ಮೂಗು ಮತ್ತು ಉತ್ತಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ.
ಆಸ್ತಮಾ ಅಥವಾ ಸೈನಸ್ನಂತಹ ಕಾಯಿಲೆಗಳನ್ನು ಹೊಂದಿರುವವರು ವಿಶೇಷವಾಗಿ ಈ ನಿಂಬೆ ಟ್ರಿಕ್ ಅನ್ನು ಪ್ರಯತ್ನಿಸಬೇಕು. ಏಕೆಂದರೆ ಇದು ಅವರ ಶ್ವಾಸಕೋಶದ ಮಾರ್ಗಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದಲ್ಲದೇ, ಎದೆಯ ಬಿಗಿತ ಮತ್ತು ಕಫ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ: ನಿಂಬೆ ರಕ್ತ ಪರಿಚಲನೆಯನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ರಾತ್ರಿ ಹೊತ್ತು ನೀವು ಮಲಗುವ ಮುನ್ನ ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳುವುದರಿಂದ ರಾತ್ರಿಯಿಡೀ ಇದರ ಪರಿಮಳದಲ್ಲಿಯೇ ಉಸಿರಾಡುತ್ತೀರಿ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ : ನಿಂಬೆಯ ಆರ್ದ ಮತ್ತು ಉಲ್ಲಾಸಕರ ಪರಿಮಳವು ಒತ್ತಡವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ. ಅರೋಮಾಥೆರಪಿಯಲ್ಲಿ ನಿಂಬೆಯನ್ನು ‘ಒತ್ತಡ ಬಸ್ಟರ್’ ಎಂದು ಕರೆಯಲಾಗುತ್ತದೆ. ಇದು ನಮ್ಮ ಮೆದುಳಿನಲ್ಲಿ ಸಂತೋಷದ ಹಾರ್ಮೋನ್ ‘ಸೆರೊಟೋನಿನ್’ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಮನಸ್ಥಿತಿ ಬದಲಾವಣೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಯಾವುದೇ ಒತ್ತಡವಿಲ್ಲದೇ ಶಾಂತಿಯುತವಾಗಿ ನಿದ್ರಿಸಲು ಈ ಟ್ರಿಕ್ ಅನ್ನು ಪ್ರಯತ್ನಿಸಬಹುದು.
ಸೊಳ್ಳೆಗಳನ್ನು ತೊಡೆದುಹಾಕಲು: ಮಲಗಿರುವಾಗ ಸೊಳ್ಳೆಗಳು ಮಾಡುವ ಶಬ್ದಕ್ಕಿಂತ ದೊಡ್ಡ ಕಿರಿಕಿರಿ ಮತ್ತೊಂದಿಲ್ಲ. ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದರೂ ಸೊಳ್ಳೆಗಳ ಶಬ್ದ ಮತ್ತು ಪದೇ ಪದೇ ಕಚ್ಚುವಿಕೆಯಿಂದ ಇಡೀ ಮೂಡ್ ಹಾಳಾಗುತ್ತದೆ. ನಿಮಗೂ ಇದೇ ಸಮಸ್ಯೆ ಆಗುತ್ತಿದ್ದರೆ, ನಿಮ್ಮ ಹಾಸಿಗೆಯ ಪಕ್ಕದಲ್ಲಿ ನಿಂಬೆಹಣ್ಣಿನ ಪೀಸ್ಗಳನ್ನು ಇಡಬಹುದು. ವಾಸ್ತವವಾಗಿ, ಸೊಳ್ಳೆಗಳು ನಿಂಬೆ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ನಿಮ್ಮೊಂದಿಗೆ ನಿಂಬೆಹಣ್ಣನ್ನು ಇಟ್ಟುಕೊಂಡರೆ, ಸೊಳ್ಳೆಗಳು ನಿಮ್ಮ ಸುತ್ತಲೂ ಹಾರಾಡುವುದಿಲ್ಲ.
ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ: ದಿನೇ-ದಿನೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದಿಂದ ಅನೇಕ ಮಂದಿ ಸಮಸ್ಯೆಗೊಳಗಾಗುತ್ತಿದ್ದಾರೆ ಮತ್ತು ಈ ವಿಷಕಾರಿ ಗಾಳಿಯಿಂದ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ನಿಂಬೆ ಹಣ್ಣು ಸರಳ ಉಪಾಯವಾಗಿದೆ. ವಾಸ್ತವವಾಗಿ, ನಿಂಬೆಯ ನಿರ್ವಿಶೀಕರಣ ಗುಣಲಕ್ಷಣಗಳಿಂದಾಗಿ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ.
ನಿಂಬೆಯ ಬಲವಾದ ಮತ್ತು ತಾಜಾ ವಾಸನೆಯು ನಿಮ್ಮ ಸುತ್ತಲಿನ ಗಾಳಿಯನ್ನು ನೈಸರ್ಗಿಕವಾಗಿ ಶುದ್ದೀಕರಿಸಲು ಮತ್ತು ತಾಜಾಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ನಿದ್ರೆಯ ಮಟ್ಟವನ್ನು ಸುಧಾರಣೆ ಆಗುತ್ತದೆ.