ಬಾಲಿವುಡ್ ನಟ ಅಜಯ್ ದೇವಗನ್ ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕೂತಿರುತ್ತಾರೆ. ಒಮ್ಮೆಯಾದರೂ ಅವರನ್ನು ನೇರವಾಗಿ ನೋಡಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಆದರೆ ತಮ್ಮನ್ನು ಭೇಟಿಯಾಗಿ ಕೈ ಮುಟ್ಟಲು ಬಂದ ಅಭಿಮಾನಿಯ ಮೇಲೆ ಅಜಯ್ ದೇವಗನ್ ಸಿಟ್ಟಾದ ಘಟನೆ ನಡೆದಿದೆ.
ಭಾನುವಾರ (ಏಪ್ರಿಲ್ 2) ರಂದು ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಅವರು ಮುಂಬೈನ ನಿವಾಸದ ಎದುರು ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಬಂದಿದ್ದದರು. ಆದರೆ ಈ ವೇಳೆ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಅಜಯ್ ದೇವಗನ್ಗೆ ಸರಿ ಎನಿಸಲಿಲ್ಲ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಅಜಯ್ ದೇವಗನ್ ಮನೆ ಎದುರು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಎಲ್ಲರೂ ಮುಗಿಬಿದ್ದು ಅವರಿಗೆ ಜನ್ಮದಿನದ ಶುಭಾಶಯ ಕೋರಲು ಪ್ರಯತ್ನಿಸಿದರು. ಅಭಿಮಾನಿಗಳ ಗುಂಪಿನಲ್ಲಿ ಇದ್ದ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ಅಜಯ್ ದೇವಗನ್ ಅವರ ಕೈ ಹಿಡಿದುಕೊಂಡ. ಕೂಡಲೇ ಅವರು ತಮ್ಮ ಕೈಯನ್ನು ರಭಸವಾಗಿ ಬಿಡಿಸಿಕೊಂಡರು.