ಚಿಕ್ಕಮಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆ ಅಗತ್ಯ ಇಲ್ಲ ಎಂದು ಎಂಎಲ್ಸಿ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆಯ ಅಗತ್ಯವೂ ಇಲ್ಲ. ಅವರ ಬೆದರಿಕೆಗೆ ನಾನು ಹೆದರೋದು ಇಲ್ಲ ಎಂದರು.
ಬೆಳಗಾವಿಯನ್ನು ರಿಪಬ್ಲಿಕ್ ಆಗಲು ಜನರೂ ಒಪ್ಪಲ್ಲ. ಅದಕ್ಕೆ ನಾವೂ ಅವಕಾಶ ಕೊಡಲ್ಲ. ನನ್ನ ಮೇಲೆ ದೈಹಿಕ ಹಲ್ಲೆ ನಡೆದ ಸಂಬಂಧ ಕಿಶೋರ್ ಹಾಗೂ ಅರುಣ್ ದೂರು ನೀಡಿದ್ದಾರೆ. ಸುವರ್ಣ ಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಅವರಿಬ್ಬರೂ ನನ್ನ ಜೊತೆ ಇದ್ದರು. ಹಾಗಾಗಿ ದೂರು ನೀಡಿದ್ದಾರೆ ಎಂದರು.
ದೂರಿನ ಅಡಿ, ಏನು ಕ್ರಮಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ದೂರು ನೀಡಿದ್ದೇನೆ. ಎಫ್ಐಆರ್ ಪ್ರತಿ ನೀಡಿಲ್ಲ. ಎಫ್ಐಆರ್ಗಾಗಿ ಎರಡು ದಿನ ನಮ್ಮ ವಕೀಲರು ಹೋಗಿದ್ದಾರೆ. ಕಮಿಷನರ್ 15 ದಿನ ಸಮಯ ಇದೆ ಎಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ. ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಕಮಿಷನರ್ ಆ ಜಾಗದಲ್ಲಿ ಇರಲು ಸೂಕ್ತರಲ್ಲ ಎಂದು ಕಿಡಿಕಾರಿದ್ದಾರೆ.