ಫ್ರಾನ್ಸ್ ನ ಇಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಸರ್ಕಾರದ ಮಹಿಳಾ ಸಚಿವೆ ಮರ್ಲಿನ್ ಶಿಯಪ್ಪಾ ಪ್ಲೇಬಾಯ್ ಮ್ಯಾಗಜಿನ್ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಆದರೆ ತಮ್ಮ ನಡೆಯನ್ನು ಮರ್ಲಿನ್ ಸಮರ್ಥಿಸಿಕೊಂಡಿದ್ದಾರೆ.
ಬಲಪಂಥೀಯರನ್ನು ಹಲವು ಬಾರಿ ಕೆರಳಿಸಿದ್ದ 40 ವರ್ಷದ ಸ್ತ್ರೀವಾದಿ ಲೇಖಕಿ ಮರ್ಲಿನ್ ಶಿಯಪ್ಪಾ ಈ ಹಿಂದೆಯೂ ಹಲವು ಭಾರಿ ವಿವಾದಕ್ಕೀಡಾಗಿದ್ದರು. ಮರ್ಲಿನ್ ಶಿಯಪ್ಪಾ ನಡೆಗೆ ಪ್ರಧಾನಿ ಮತ್ತು ಎಡಪಂಥೀಯ ವಿಮರ್ಶಕರು ಕೂಡ ಅಸಮಧಾನ ಹೊರ ಹಾಕಿದ್ದಾರೆ.
ಫ್ರಾನ್ಸ್ನಲ್ಲಿ, ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ, ಅದರ ವಿರುದ್ಧ ಕಳೆದ 3 ತಿಂಗಳುಗಳಿಂದ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವಾಗಲೂ ಪ್ರತಿಪಕ್ಷಗಳಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ತಮ್ಮ ಸಚಿವರೇ ‘ಪ್ಲೇಬಾಯ್’ನಲ್ಲಿ ಚಿತ್ರಗಳನ್ನು ಪ್ರಕಟಿಸಿರುವುದು ಅವರ ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.
ಸರ್ಕಾರದಲ್ಲಿ ಕೆಲವರು ಮಾರ್ಲಿನ್ ಪರವಾಗಿದ್ದರೆ, ಅನೇಕ ಅಸಮಾಧಾನ ಹೊರ ಹಾಕಿದ್ದಾರೆ.