ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮಕ್ಕೆ ಇಂದು ಸೇನಾ ವಾಹನ ಪಲ್ಟಿಯಾಗಿ ಹುತಾತ್ಮಗೊಂಡ ಧರ್ಮರಾಜ ಖೋತ ಯೋಧನ ಪಾರ್ಥಿವ ಶರೀರ ಬಂದು ತಲುಪಿದೆ.ಧರ್ಮರಾಜ ಖೋತ ಅವರ ಮನೆಯ ಮುಂದೆ ಪಾರ್ಥಿವ ಶರೀರದ ದರ್ಶನವನ್ನ ಕಲ್ಪಿಸಲಾಗಿದೆ.
ಹುತಾತ್ಮ ಯೋಧ ಧರ್ಮರಾಜನ ಪಾರ್ಥಿವ ಶರೀರ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಇನ್ನು ಎರಡೇ ತಿಂಗಳಲ್ಲಿ ಹುತಾತ್ಮ ಯೋಧ ಧರ್ಮರಾಜ ನಿವೃತ್ತಿ ಹೊಂದುತ್ತಿದ್ದ ಅಷ್ಟರಲ್ಲಿ ಈ ಘಟನೆ ಸಂಭವಿಸಿದೆ, ಇನ್ನು ಗ್ರಾಮದಲ್ಲಿ ಮೌನದ ಛಾಯೆ ಆವರಿಸಿದ್ದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.