ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ವಾಕ್ಸಮರಕ್ಕೆ ವೇದಿಕೆಯಾಗಿದೆ. ಬಿಜೆಪಿ ವಿರುದ್ದ ಮಾತನಾಡ್ತಿದ್ದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧದ ಆರೋಪಕ್ಕೆ ಕಾಯುತ್ತಿದ್ದ ಬಿಜೆಪಿಗೆ ಸಚಿನ್ ಆತ್ಮಹತ್ಯೆ ಪ್ರಕರಣ ಬ್ರಹ್ಮಾಸ್ತ್ರವಾಗಿ ದೊರಕಿದೆ. ಆತ್ಮಹತ್ಯೆ ವಿಚಾರವನ್ನು ಮುಂದಿಟ್ಟಿಕೊಂಡು ಪ್ರಿಯಾಂಕ್ ಅವರನ್ನು ಹಣಿಯಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಂದಲೂ ಆರೋಪ ಪ್ರತ್ಯಾರೋಪ ಶುರುವಾಗಿದೆ..
ಸಚಿವ ಪ್ರಿಯಾಂಕ್ ಖರ್ಗೆ ಸದ್ಯ ಕಮಲ ಪಡೆಯ ಟಾರ್ಗೆಟ್ ಆಗಿದ್ದಾರೆ. ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಅವರ ಆಪ್ತನ ಹೆಸರು ಕೇಳಿ ಬಂದಿರುವ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಬಿಜೆಪಿ ಪಾಳಯ ಆಗ್ರಹಿಸುತ್ತಿದೆ. ಪ್ರಿಯಾಂಕ್ ವಿರುದ್ಧ ಹೋರಾಟವನ್ನು ರೂಪಿಸಲು ಬಿಜೆಪಿ ನಿರ್ಧಾರ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಅವರಿಗೆ ಸಚಿನ್ ಆತ್ಮಹತ್ಯೆ ಪ್ರಕರಣ ಹಿನ್ನಡೆಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ..ಮೃತ ಗುತ್ತಿಗೆದಾರ ಸಚಿನ್ ನಿವಾಸಕ್ಕೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ನಿಯೋಗ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ, ವರದಿಯನ್ನ ಕಲೆಹಾಕಿದೆ.
ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ನೀಡಬೇಕೆನ್ನುವುದು ಸೇರಿದಂತೆ, ಸಿಬಿಐ ತನಿಖೆ ನಡೆಸಬೇಕು,ಸಚಿನ್ ಕುಟುಂಬಕ್ಕೆ ಭದ್ರತೆ ನೀಡಬೇಕು,ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಬಿವೈ ವಿಜಯೇಂದ್ರಆಗ್ರಹಿಸಿದ್ದಾರೆ..
ಸಿದ್ದಲಿಂಗ ಸ್ವಾಮೀಜಿಗಳ ಧ್ವನಿ ಹತ್ತಿಕ್ಕಲು, ಮಹಾರಾಷ್ಟ್ರದ ಕಿಲ್ಲರ್ಗಳನ್ನ ಕರೆಸಿ ಹತ್ಯೆ ಮಾಡಿಸಲು ಪ್ಲಾನ್ ಮಾಡಿದ್ರು ಅಂತಾ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಡೆತ್ ನೋಟಲ್ಲಿ ಉಲ್ಲೇಖವಾಗಿದ್ದು ಇದು ಗಂಭೀರವಾದ ಪ್ರಕರಣದಲ್ಲಿ ಸಚಿನ್ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು.
ನಮ್ಮ ರಾಜ್ಯದ ಪೊಲೀಸರಿಂದ ಖರ್ಗೆ ಕುಟುಂಬದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ CBI ತನಿಖೆ ಆಗಬೇಕು.ಬಿಜೆಪಿ ಮುಂದಿನ ನಡೆ ಜನವರಿ 3ರ ವರೆಗೂ ಕಾಯ್ತೀವಿ ಭಗವಂತ ಅವರಿಗೆ ಬುದ್ದಿಕೊಟ್ಟು CBI ತನಿಖೆ ನೀಡಲಿ. ಇಲ್ಲದಿದ್ರೆ ಜನವರಿ 4ರಂದು ಕಲ್ಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸೋದ್ರ ಜೊತೆಗೆ ಖರ್ಗೆ ಅವರ ಮನೆ ಮುತ್ತಿಗೆ ಹಾಕ್ತೀವಿ ಎಂಬ ಎಚ್ಚರಿಕೆಯನ್ನ ನೀಡಿದ್ರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ..
ಯಾವುದೇ ದಾಖಲೆಯಿಲ್ಲದೆ ಬಿಜೆಪಿಯವರು ಆರೋಪ ಮಾಡ್ತಿದ್ದಾರೆ ಅಂತ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಇರಬಹುದು ಅಂತಿದ್ದಾರೆ, ಎಷ್ಟು ಜನ ಗುಲ್ಬರ್ಗಾ ಮುತ್ತಿಗೆಗೆ ಬರ್ತೀರ ಹೇಳಿ ಎಲ್ಲರಿಗೆ ಕಾಫಿ,ಟೀ ವ್ಯವಸ್ಥೆ ಮಾಡಿಸುತ್ತೇನೆ. ಎಷ್ಟೇ ಚೀರಾಟ, ಹಾರಾಟ ಮಾಡಿದ್ರು ನೋ ಪ್ರಾಬ್ಲಂ. ಈ ಪ್ರಕರಣದಲ್ಲಿ ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ, ಪ್ರಕರಣದ ಬಗ್ಗೆ ಸಮಾಜದಲ್ಲಿ ಸಂಶಯದ ಚರ್ಚೆ ನಡೆದಿವೆ
ಸತ್ಯಾಂಶ ತಿಳಿಯಲು ಸ್ವತಂತ್ರ ತನಿಖೆ ಅಗತ್ಯವಾಗಿದ್ದು ಹಾಗಾಗಿ ಸಿಐಡಿ ತನಿಖೆಗೆ ನೀಡುವಂತೆ ಡಿಸೆಂಬರ್ ೨೭ ರಂದೇ ಸಿಎಂ, ಹೋಮ್ ಮಿನಿಸ್ಟರ್ ಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ…