ಬೆಂಗಳೂರು: ಸುಮಾರು 12 ವರ್ಷಗಳಿಂದ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಲಡ್ಡು ವಿತರಣೆ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಜೊತೆಗೆ 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗಿದೆ. ಈ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಶಾಸಕ ಟಿಎ ಶರವಣ ಅವರು ಚಾಲನೆ ನೀಡಿದ್ದಾರೆ.
ನಂತರ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು, ತಿರುಮಲ ತಿರುಪತಿಗೆ ಹೋಗಬೇಕು , ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತಿ, ಎಲ್ಲರಿಗೂ ಇರುತ್ತದೆ ಎಂದರು.
ಇನ್ನೂ ಶುದ್ದ ತುಪ್ಪ, ಗೋಡಂಬಿ,ದಾಕ್ಷಿ,ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗಿದೆ.ಶ್ರೀ ವೆಂಕಟೇಶ್ವರ ದೇವಸ್ಥಾನಗಳಿಗೆ ಲಡ್ಡು ನೀಡಲಾಗುತ್ತದೆ ಬಂದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು.ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯ ಭಕ್ತರು ಅವರವರ ಭಕ್ತಿಭಾವನೆಗೆ ಸ್ಮರಣೆ ಮಾಡುತ್ತಾರೆ.
ತಿರುಪತಿ ತಿಮ್ಮಪ್ಪ ನಂಬಿದ ಭಕ್ತರಿಗೆ ಎಂದು ಸಂಕಷ್ಟಗಳು ಬರುವುದಿಲ್ಲ, ಇನ್ನೂ ಸಕಲ ಸಂಕಷ್ಟಗಳು ದೂರವಾಗಲಿ, ರೋಗರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಬಳಿ ಇರುವ ಶ್ರೀ ಸಾಯಿ ಪಾರ್ಟಿ ಹಾಲ್ನಲ್ಲಿ ಭಕ್ತಾದಿಗಳಿಗೆ ಲಡ್ಡು ವಿತರಿಸಲಾಗಿದೆ. ತಿರುಪತಿ ಲಡ್ಡು ಮಾದರಿಯಲ್ಲಿ 100 ಬಾಣಸಿಗರ ನೇತೃತ್ವದಲ್ಲಿ ತಯಾರಿಸಿದ ಲಡ್ಡು ಇದಾಗಿದೆ. ಶುದ್ದ ತುಪ್ಪ, ಗೋಡಂಬಿ, ದಾಕ್ಷಿ, ಕಡಲೆಬೇಳೆ ಬಳಸಿ ಈ ವಿಶೇಷವಾದ ಲಡ್ಡುವನ್ನು ತಯಾರಿಸಲಾಗಿದೆ.