ಇವತ್ತು ವೈಕುಂಠ ಏಕಾದಶಿ.. ದೇಶದಾದ್ಯಂತ ಹಿಂದೂಗಳ ಪಾಲಿಗೆ ಏಕಾದಶಿ ಪವಿತ್ರ ದಿನವಾಗಿ ನಂಬಲಾಗಿದೆ. ಮೂರು ಕೋಟಿ ದೇವತೆಗಳೊಂದಿಗೆ ಗರುಡ ವಾಹನ ರೂಪದಲ್ಲಿ ಶ್ರೀವಿಷ್ಣುವು ಭೂಮಿಗೆ ಭಕ್ತರಿಗೆ ದರ್ಶನ ನೀಡುವ ದಿನ.
ಈ ಪರಮ ಪುಣ್ಯದ ದಿನಕ್ಕಾಗಿ ಹಾತೊರೆಯುವ ಭಕ್ತಸಾಗರವೇ ತಿರುಪತಿ ತಿರುಮಲದ ಶ್ರೀವೆಂಕಟೇಶ್ವರ ದೇವಾಲಯಕ್ಕೆ ಹರಿದು ಬರ್ತಿದೆ.ಇನ್ನು ತಿರುಮಲದ ಶ್ರೀವೆಂಕಟೇಶ್ವರ ದೇವಾಲಯಕ್ಕೆ ವಿಧಾನ ಪರಿಷತ್ ಶಾಸಕ ಟಿಎ ಶರವಣ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅದಲ್ಲದೆ ನಾಡಿನ ಜನತೆಗೆ ಒಳಿತು ಮಾಡಲಿ, ನೆಮ್ಮದಿ ಶಾಂತಿಯಿಂದ ಬದುಕಲಿ ಹಾಗೂ ಎಲ್ಲ ಭಕ್ತರನ್ನು ರಕ್ಷಿಸಲಿ ಎಂದು ಶಾಸಕ ಟಿಎ ಶರವಣ ಅವರು ಪ್ರಾರ್ಥಿಸಿದ್ದಾರೆ.
ಇತ್ತಿಚಿಗಷ್ಟೆ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಇದರ ಜೊತೆಗೆ 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗಿದೆ. ತಿರುಪತಿ ಲಡ್ಡು ಮಾದರಿಯಲ್ಲಿ 100 ಬಾಣಸಿಗರ ನೇತೃತ್ವದಲ್ಲಿ ತಯಾರಿಸಿದ ಲಡ್ಡು ಇದಾಗಿತ್ತು.
ಶುದ್ದ ತುಪ್ಪ, ಗೋಡಂಬಿ, ದಾಕ್ಷಿ, ಕಡಲೆಬೇಳೆ ಬಳಸಿ ಈ ವಿಶೇಷವಾದ ಲಡ್ಡುವನ್ನು ತಯಾರಿಸಿ ವಿತರಣೆ ಮಾಲಾಗಿದೆ. ಇನ್ನೂ ಸುಮಾರು 12 ವರ್ಷಗಳಿಂದ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಲಡ್ಡು ವಿತರಣೆ ಮಾಡಲಾಗುತ್ತಿದೆ.