ಬೆಂಗಳೂರು: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿ ಇಂದು ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ. ಕೋರ್ಟ್ ಗೆ ಹಾಜರು ಆಗುವಾಗ ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿಯಾಗಿದ್ದಾರೆ. ಪವಿತ್ರಾ ಗೌಡ ಹಾಗೂ ಇನ್ನಿತರೆ ಆರೋಪಿಗಳು ತುಸು ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಬಂದಿದ್ದರು. ಪವಿತ್ರಾ ಗೌಡ ಅವರು ತಮ್ಮ ವಕೀಲರೊಂದಿಗೆ ಚರ್ಚೆ ಮಾಡುತ್ತಾ ನ್ಯಾಯಾಧೀಶರ ಆಗಮನಕ್ಕೆ ಕಾಯುತ್ತಾ ನಿಂತಿದ್ದರು.
ದರ್ಶನ್ ತುಸು ತಡವಾಗಿ ನ್ಯಾಯಾಲಯಕ್ಕೆ ಬಂದರು. ಅವರನ್ನು ಅವರ ಗೆಳೆಯ ಧನ್ವೀರ್ ಗೌಡ ಕಾರಿನಲ್ಲಿ ಕರೆದುಕೊಂಡು ಬಂದರು. ನ್ಯಾಯಾಲಯಕ್ಕೆ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದರು. ದರ್ಶನ್ ಅವರ ಆರೋಗ್ಯವನ್ನು ಪವಿತ್ರಾ ಗೌಡ ವಿಚಾರಿಸಿದರು. ಪವಿತ್ರಾರ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಆ ಬಳಿಕ ಪವಿತ್ರಾರ ಆರೋಗ್ಯವನ್ನು ದರ್ಶನ್ ವಿಚಾರಿಸಿದ್ದಲ್ಲದೆ, ಅವರ ಬೆನ್ನು ಸವರಿ ಅವರನ್ನು ಸಂತೈಸಿದರು ಎಂದು ಹೇಳಲಾಗಿದೆ.
ಪವಿತ್ರಾ ಗೌಡ ಅವರು ಹಲವು ದೇವಾಲಯಗಳಿಗೆ ತೆರಳಲು ಒಂದು ತಿಂಗಳ ಅವಕಾಶ ಕೋರಿದ್ದಾರೆ. ರಾಜ್ಯ ಬಿಟ್ಟು ಹೋಗಲು ಅವಕಾಶ ಕೇಳಿರೋ ಪವಿತ್ರಾಗೌಡ ಅವರು ಈ ಸಂಬಂಧವಾಗಿ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಇನ್ನೂ ರೇಣುಕಾ ಸ್ವಾಮಿ ಕೇಸ್ ಸಂಬಂಧಿಸಿದಂತೆ 17 ಆರೋಪಿಗಳು ಸೆಷನ್ಸ್ ಕೋರ್ಟ್ಗೆ ಹಾಜರಾಗಿದ್ದರು. ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಕೋರ್ಟ್ ಹಾಜರಾಗಿದ್ದರು. ಆದರೆ, ಇದೀಗ ಈ ಕೇಸ್ ಸಂಬಂಧ ನ್ಯಾಯಾಲಯ ವಿಚಾರಣೆಯನ್ನ ಫೆಬ್ರವರಿ 25ಕ್ಕೆ ಮುಂದೂಡಿದೆ.