ಬಿಗ್ ಬಾಸ್ ಮನೆಯ ಪ್ರತಿಯೊಬ್ಬ ಸದಸ್ಯರು ಅಲ್ಲಿನ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು. ನಿಯಮ ಮುರಿದರೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡುದ್ದಾರೆ. ಆದರೂ ಕೆಲವು ಸಂದರ್ಭದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಕೈಯಿಂದ ತಪ್ಪಿಸಿಕೊಂಡು ಬಿಡುತ್ತಾರೆ. ಆದರೆ ಅದನ್ನು ನೋಟಿಸ್ ಮಾಡಿ ಸುದೀಪ್ ಅವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ಇದೀಗ ನಟ ಕಿಚ್ಚ ಸುದೀಪ್ ಕೂಡ ದೊಡ್ಮನೆಯಲ್ಲಿ ತಪ್ಪು ಮಾಡಿದ ಭವ್ಯಾ ಗೌಡರನ್ನು ಶಿಕ್ಷಿಸಿದ್ದಾರೆ.
ಭವ್ಯಾ ಗೌಡ ಹನುಮಂತನ ಮೇಲೆ ಕೈ ಮಾಡಿದ್ದರು. ಆದರೂ ಅವರಿಗೆ ಬಿಗ್ ಬಾಸ್ ಶಿಕ್ಷೆ ನೀಡಿರಲಿಲ್ಲ. ಆದರೆ ಸುದೀಪ್ ಅವರು ಭವ್ಯಾಗೆ ಸೂಕ್ತ ಶಿಕ್ಷೆ ನೀಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನ ನಿಯಮದ ಪ್ರಕಾರ, ಯಾರೂ ಕೂಡ ಇನ್ನೊಬ್ಬರ ಮೇಲೆ ಕೈ ಮಾಡುವಂತಿಲ್ಲ. ಈ ಮೊದಲು ಕೂಡ ಕೈ ಮಾಡಿದ ಸ್ಪರ್ಧಿಗಳನ್ನು ಮುಲಾಜಿಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಆದರೆ ಈ ವಾರ ಭವ್ಯಾ ಗೌಡ ಅವರು ಹನುಮಂತನಿಗೆ ಅಕ್ಷರಶಃ ಹೊಡೆದರು! ಆದರೂ ಸಹ ಭವ್ಯಾಗೆ ಶಿಕ್ಷೆ ನೀಡಿರಲಿಲ್ಲ. ಭವ್ಯಾ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಒಂದು ಕಾರಣ ಕೂಡ ಇತ್ತು.
ಭವ್ಯಾ ಅವರು ಹನುಮಂತನಿಗೆ ಹೊಡೆದಿದ್ದು ಟಾಸ್ಕ್ ನಡೆಯುವ ಮಧ್ಯೆದಲ್ಲಿ. ಹಾಗಾಗಿ ಅದನ್ನು ಟಾಸ್ಕ್ನ ಒಂದು ಭಾಗ ಎಂಬಂತೆ ಬಿಗ್ ಬಾಸ್ ಪರಿಗಣಿಸಿರಬಹಿದು. ಇಲ್ಲದೇ ಇದ್ದಿದ್ದರೆ ಭವ್ಯಾ ಅವರನ್ನು ದೊಡ್ಮನೆಯಿಂದ ಆ ಕೂಡಲೇ ಹೊರಗೆ ಕಳಿಸಿಬೇಕಿತ್ತು. ಏನೇ ಆದರೂ ಭವ್ಯಾ ಕೈ ಮಾಡಿದ್ದು ಸುದೀಪ್ ಅವರಿಗೆ ಸರಿ ಎನಿಸಲಿಲ್ಲ. ಆದ್ದರಿಂದ ಈ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಶಿಕ್ಷೆ ನೀಡಿದರು.
ಹನುಮಂತನಿಗೆ ಹೊಡೆದ ಕಾರಣಕ್ಕೆ ಭವ್ಯಾ ಗೌಡ ಕಳಪೆ ಬಟ್ಟೆ ಧರಿಸಿ ಜೈಲಿಗೆ ಹೋಗಿ 24 ಗಂಟೆಗಳ ಕಾಲ ಕಳೆಯಬೇಕಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದದ ಭವ್ಯಾ ಗೌಡ ‘ನನಗೆ ವಿಷಾದ ಇಲ್ಲ. ಯಾಕೆಂದರೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ’ ಎಂದರು. ಅಲ್ಲದೆ ಭಾನುವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಕಳಪೆ ಬಟ್ಟೆ ಧರಿಸಿಯೇ ಭಾಗವಹಿಸಿದರು. ಈ ರೀತಿ ಆಗಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.