ಪಿರಿಯಡ್ಸ್ ಎಂಬುದು ಮಹಿಳೆಯ ಋತುಚಕ್ರದ ಭಾಗವಾಗಿ ಪ್ರತಿ ತಿಂಗಳೂ ಸಂಭವಿಸುವ ಸಾಮಾನ್ಯ ಯೋನಿ ರಕ್ತಸ್ರಾವವಾಗಿದೆ. ಪ್ರತಿ ತಿಂಗಳು ಈ ಮೂಲಕ ನಿಮ್ಮ ದೇಹವು ಗರ್ಭಧಾರಣೆಗೆ ಸಿದ್ಧವಾಗುತ್ತದೆ. ಮುಟ್ಟು ರಕ್ತ, ಯೋನಿ ಸ್ರವಿಸುವಿಕೆ ಮತ್ತು ಗರ್ಭಾಶಯದ ಗೋಡೆಯ ಎಂಡೊಮೆಟ್ರಿಯಲ್ ಕೋಶಗಳನ್ನು ಒಳಗೊಂಡಿರುವ ಒಂದು ಸಂಕೀರ್ಣ ಜೈವಿಕ ದ್ರವವಾಗಿದೆ.
ಮಹಿಳೆಯರಿಗೆ ಪ್ರತೀ ತಿಂಗಳು ಋತುಚಕ್ರದ ಸಂದರ್ಭದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವರಲ್ಲಿ ತಲೆನೋವು ಕಂಡುಬಂದರೆ, ಇನ್ನು ಕೆಲವರಿಗೆ ಅತಿ ಯಾದ ಹೊಟ್ಟೆನೋವು ಇರುವುದು. ಮನಸ್ಥಿತಿ ಬದಲಾವಣೆ ಎನ್ನುವುದು ಸಹಜ ಕೂಡ. ಆದರೆ ಹೆಚ್ಚಿನ ಮಹಿಳೆಯರಲ್ಲಿ ಯೋನಿ ಭಾಗದಲ್ಲಿ ತುರಿಕೆಯು ಕಂಡುಬರುವುದು. ಇದು ಋತುಚಕ್ರದ ಭಾಗದಲ್ಲಿ ತೀವ್ರ ಸ್ವರೂಪದಲ್ಲಿ ಇರುವುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ, ಮುಜುಗರಕ್ಕೆ ಕಾರಣವಾಗಬಲ್ಲದು.
ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ತೋಚದು. ಆದರೆ ಯೋನಿ ತುರಿಕೆಗೆ ಕಾರಣಗಳು ಏನು ಎನ್ನುವುದನ್ನು ಪತ್ತೆ ಮಾಡಿಕೊಂಡರೆ, ಆಗ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗಲಿದೆ
ಹಳೆ ರಕ್ತ ಹೊರಹೋಗುವುದು:
ತುರಿಕೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಹಳೆದಯ ರಕ್ತವು ಹೊರಹೋಗುವುದು. ಇದರಿಂದಾಗಿ ಕಿರಿಕಿರಿ ಆಗುವುದು. ಋತುಚಕ್ರದ ಅಂತ್ಯದಲ್ಲಿ ಇದ್ದರೆ ಆಗ ಇದು ಹೆಚ್ಚಾಗಿರುವುದು.
ಅತಿಯಾದ ಉರಿಯೂತ:
ಯೋನಿ ಭಾಗದಲ್ಲಿ ಅತಿಯಾದ ತುರಿಕೆ ಉಂಟಾಗಲು ಮತ್ತೊಂದು ಕಾರಣವೆಂದರೆ ಉರಿಯೂತ. ಋತುಚಕ್ರದ ಸಂದರ್ಭದಲ್ಲಿ ದೇಹದಲ್ಲಿ ಅತಿಯಾದ ಉರಿಯೂತ ಉಂಟಾಗುವ ಕಾರಣದಿಂದಾಗಿ ತುರಿಕೆ ಹೆಚ್ಚಾಗುವುದು
ಯೀಸ್ಟ್ ಅಥವಾ ಬ್ಯಾಕ್ಟೀರಿಯಾವು ಅತಿಯಾಗಿ ಬೆಳವಣಿಗೆ ಆಗುವ ಕಾರಣದಿಂದಾಗಿ ಯೀಸ್ಟ್ ಸೋಂಕು ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು. ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಹೀಗೆ ಆಗುತ್ತಿದೆ ಎಂದು ನಿಮಗನಿಸಿದರೆ, ಆಗ ವೈದ್ಯರನ್ನು ಭೇಟಿ ಮಾಡಿ. ಋತುಚಕ್ರದ ಸಂದರ್ಭದಲ್ಲೇ ಪರೀಕ್ಷೆ ಮಾಡಿಸಿಕೊಳ್ಳಬಹುದು. ಫಲಿತಾಂಶವು ಪಾಸಿಟಿವ್ ಆಗಿದ್ದರೆ ಆಗ ವೈದ್ಯರು ಕೆಲವು ಔಷಧಿಗಳನ್ನು ಸೂಚಿಸ ಬಹುದು. ನೆಗೆಟಿವ್ ಆಗಿದ್ದರೆ ಆಗ ಕೆಲವು ಕ್ರೀಮ್ ಗಳನ್ನು ಹಚ್ಚಿಕೊಂಡರೂ ತುರಿಕೆ ಕಡಿಮೆ ಆಗುವುದು
ಋತುಚಕ್ರದ ಸಂದರ್ಭದಲ್ಲಿ ಯೋನಿ ಭಾಗದಲ್ಲಿ ತುರಿಕೆಯು ಉಂಟಾಗುವುದು. ಪ್ಯಾಡ್ ಧರಿಸಿದ ವೇಳೆ ನಿಮಗೆ ಅಲರ್ಜಿ ಉಂಟಾಗಿ ಅದರಿಂದ ತುರಿಕೆ ಕಾಣಿಸುತ್ತಿದ್ದರೆ ಆಗ ಸುಗಂಧವಿಲ್ಲದ ಪ್ಯಾಡ್ ಬಳಕೆ ಮಾಡಿನೋಡಿ. ತುರಿಕೆಯು ಹಾಗೆ ಇದ್ದರೆ ನೀವು ವೈದ್ಯರನ್ನು ಭೇಟಿ ಮಾಡುವುದೇ ಲೇಸು.