ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮನನೊಂದ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಕ್ಯಾನಲ್ ಗೆ ಜಿಗಿದು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಇದರಲ್ಲಿ ನಾಲ್ಕು ಮಕ್ಕಳು ಜಲಸಮಾಧಿಯಾದರೆ ಅದೃಷವಶಾತ್ ತಾಯಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದ್ರೆ ಈ ಪ್ರಕರಣಕ್ಕೆ ಟ್ವಿಸ್ ಇಲ್ಲಿದೆ.
ಹೌದು ಆರೋಪಿ ಲಿಂಗರಾಜು ನಾಟಕಕ್ಕೆ ತನು, ರಕ್ಷಾ, ಹಸೇನ್, ಹುಸೇನ್ ಮಕ್ಕಳು ದುರಂತ ಸಾವು ಕಂಡಿವೆ. ಲಿಂಗರಾಜು ಪತ್ನಿ ಭಾಗ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದ ಘಟನೆಯನ್ನು ಸಂಬಂಧಿಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಆಕೆಯ ಪತಿ ನಿಜ ಬಣ್ಣ ಬಯಲಾಗಿದೆ.
ಮಹಿಳೆ ಹೇಳಿದ್ದೇನು?
ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ.
ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ. ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿತ್ತು.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ಲಿಂಗರಾಜ ಭಜಂತ್ರಿ (5), ರಕ್ಷಾ ಲಿಂಗಗರಾಜ ಭಜಂತ್ರಿ (3), ಹಸನ್ ಲಿಂಗರಾಜ ಭಜಂತ್ರಿ ಹಾಗೂ ಹುಸೇನ್ ಲಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳೀಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ಲಿಂಗರಾಜು ಕಣ್ಣೀರು ಹಾಕಿ ನಾಟಕವಾಡಿದ್ದ. ಆದರೆ, ಬದುಕುಳಿದ ಪತಿಯ ನಾಟಕವನ್ನು ಪತ್ನಿ ಬಯಲು ಮಾಡಿದ್ದಾರೆ.
ಇನ್ನೂ ಭಾಗ್ಯಶ್ರೀ ಗಂಡ ಲಿಂಗರಾಜ ಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ, ತನ್ನ ಸಾಲ ಬಗೆ ಹರಿಸಿಕೊಳ್ಳಲು ತಂದೆ ತಾಯಿಯ ಬಳಿ ಕೇಳಿದ್ದನ್ನಂತೆ, ಇದಕ್ಕೆ ಅವರು ಒಪ್ಪದ ಕಾರಣ ಬೇರೆ ಕಡೆ ದುಡಿಯಲು ಹೋಗೋಣ ಎಂದು ಸಹಿತ ಪ್ಲಾನ್ ಮಾಡಿದ್ದರು ಎನ್ನಲಾಗುತ್ತದೆ. ಇಂದು ಹುಣ್ಣಮೆ ಇರುವ ಕಾರಣ ಯಲ್ಲಮ ದೇವಸ್ಥಾನಕ್ಕೆ ಹೊರಟಿದ್ದಾರೆ. ಈ ವೇಳೆ ಆಲಮಟ್ಟಿ ಎಡದಂಡೆ ಕೆನಾಲ್ ಬಳಿ ಬೈಕ್ ಪೆಟ್ರೋಲ್ ಖಾಲಿಯಾಗಿದೆ. ಇನ್ನೂ ಮಕ್ಕಳು ಹಾಗೂ ಪತ್ನಿಯನ್ನ ಬಿಟ್ಟು ಪೆಟ್ರೋಲ್ ತರಲು ಲಿಂಗರಾಜ್ ಹೋಗಿದ್ದಾನೆ. ಆತ ಪೆಟ್ರೋಲ ತಗೆದುಕೊಂಡು ಬರುವ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಇನ್ನೂ
ಲಿಂಗರಾಜ್ ಭಜಂತ್ರಿ ತೆಲಗಿ ಗ್ರಾಮ ಪಂಚಾಯತಿ ಸದಸ್ಯನಾಗಿದ್ದ. ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಅಲಾಯಿ ಹೊರುತ್ತಿದ್ದ ಲಿಂಗರಾಜ್ ಅಲಾಯಿ ದೇವರಿಗಾಗಿಯೆ ಮಕ್ಕಳಿಗೆ ಹಸೇನ್, ಹುಸೇನ್ ಎಂದು ಹೆಸರಿಟ್ಟಿದ್ದ ಎನ್ನಲಾಗುತ್ತಿದೆ. ಇನ್ನೂ ಈತ ಸುಮಾರು 50 ಲಕ್ಷದ ವರೆಗೆ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಜಮೀನಿನಲ್ಲಿ ಪಾಲು ನೀಡುವಂತೆ ಲಿಂಗರಾಜ್ ಹಾಗೂ ಪತ್ನಿ ಭಾಗ್ಯಶ್ರೀ ಕೇಳಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಮನೆಯಲ್ಲಿ ನಡೆದಿದ್ದ ಜಗಳ ಕೂಡಾ ನಡೆದಿತ್ತು ಎನ್ನಲಾಗಿದೆ… ಒಟ್ಟಿನಲ್ಲಿ ತಂದೆ ಮಾಡಿದ ಸಾಲಕ್ಕೆ ನಾಲ್ಕು ಪುಟ್ಟ ಕಂದಮ್ಮಗಳು ಬಲಿಯಾಗಿದ್ದು ನಿಜಕ್ಕೂ ಬೇಸರದ ಸಂಗತಿ. ಹುಣ್ಣಿಮೆಯ ಈ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಹೋದವರು ಮಸಣಕ್ಕೆ ಸೇರಿದ್ದು ನಿಜಕ್ಕೂ ದುರಾದೃಷ್ಟಕರ.