ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಜೈಲರ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು ಟೀಸರ್ ನೀಡಿದ ಪ್ರತಿಯೊಬ್ಬರು ರಜನಿಕಾಂತ್ ಆ್ಯಕ್ಷನ್ ಗೆ ಫಿದಾ ಆಗಿದ್ದಾರೆ.
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ಇದೀಗ ಸೀಕ್ವೆಲ್ ಬರುತ್ತಿದ್ದು ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಸನ್ ಪಿಕ್ಚರ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರ ಮಾಸ್ ಲುಕ್ ಸಖತ್ ಸದ್ದು ಮಾಡಿತ್ತು. ನೆಲ್ಸನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ಕುಮಾರ್, ಮೋಹನ್ಲಾಲ್ ಅವರ ಅತಿಥಿ ಪಾತ್ರ ಗಮನ ಸೆಳೆದಿತ್ತು. ಈಗ ಹೊಸ ಟೀಸರ್ನಲ್ಲಿ ನೆಲ್ಸನ್ ಅವರು ಚಿತ್ರವನ್ನು ನಿರ್ದೇಶನ ಮಾಡುವುದಾಗಿ ತೋರಿಸಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಜನಿಕಾಂತ್ ಮತ್ತೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸದ್ಯ ರಿಲೀಸ್ ಆಗಿರುವ ಟೀಸರ್ ಸಖತ್ತಾಗಿದ್ದು, ನೆಲ್ಸನ್ ಹಾಗೂ ಅನಿರುದ್ಧ ಅವರು ಗೋವಾದಲ್ಲಿ ಕಥೆ ಚರ್ಚೆ ಮಾಡುತ್ತಾರೆ. ಸ್ಟೋರಿ ಲೈನ್ಗಾಗಿ ಇಬ್ಬರೂ ಹುಡುಕುತ್ತಾ ಇರುತ್ತಾರೆ. ಆ್ಯಕ್ಷನ್ ಚಿತ್ರ ಮಾಡಬೇಕು ಎಂಬ ಚರ್ಚೆ ನಡೆಯುತ್ತಾ ಇರುತ್ತದೆ. ಆಗ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಸಾಯುತ್ತಾರೆ. ಕೆಲವರಿಗೆ ಚುಚ್ಚಿದರೆ, ಇನ್ನೂ ಕೆಲವರಿಗೆ ಗುಂಡು ಬೀಳುತ್ತದೆ. ನೋಡಿದರೆ ರಜನಿಕಾಂತ್. ಅವರು ಮಾಸ್ ಅವತಾರದಲ್ಲಿ ಬಂದು ಎಲ್ಲರನ್ನೂ ಸಾಯಿಸುತ್ತಾರೆ. ಇದನ್ನೇ ಸ್ಟೋರಿ ಲೈನ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
2023ರಲ್ಲಿ ರಿಲೀಸ್ ಆದ ಜೈಲರ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಒಟ್ಟು 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸನ್ ಪಿಕ್ಚರ್ಸ್ ಎರಡನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.