ಯಾದಗಿರಿ : ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸದ ಹಾಸ್ಟೆಲ್ ವಾರ್ಡನ್ ಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿರುವ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಸುರಪುರ ಶಾಸಕ ವೇಣುಗೋಪಾಲ ದಿಢೀರ್ ಭೇಟಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ಶಾಸಕ ವೇಣುಗೋಪಾಲ ಭೇಟಿ ನೀಡಿದ ವೇಳೆ, ಶಾಸಕರ ಮುಂದೆ ಸಮಸ್ಯೆಗಳನ್ನು ಹೇಳ್ಕೊಂಡ್ರು. ಕೂಡಲೇ ಹಾಸ್ಟೆಲ್ ಗೆ ವಾರ್ಡನ್ ಗೆ ಕರೆಸಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.
ಮಕ್ಕಳಿಗೆ ಮೆನ್ಯು ಪ್ರಕಾರ ನಿತ್ಯ ಊಟ ಕೊಡಲ್ಲ, ಹಾಸ್ಟೆಲ್ ನಲ್ಲಿ ಕತ್ತೆ ಕಾಯೋಕೆ ಇದೀರಾ ಎಂದು ವಾರ್ಡನ್ ತರಾಟೆಗೆ ತೆಗೆದುಕೊಂಡರು. ಬಳಿಕ ಅಡುಗೆ ಕೋಣೆ ಸೇರಿದಂತೆ ಹಾಸ್ಟೆಲ್ ಪ್ರತಿಯೊಂದು ಕೋಣೆಗಳ ವೀಕ್ಷಣೆ ನಡೆಸಿದ್ರು. ಇನ್ನೊಂದು ಬಾರಿ ವಿದ್ಯಾರ್ಥಿಗಳು ದೂರು ನೀಡಿದ್ರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.