ಮಹಾಕುಂಬಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸಿದ್ದಾಳೆ. ಈಕೆಯ ಕಣ್ಣೋಟಕ್ಕೆ, ಮೋಹಕ ನಗುವಿನ ಕೋಟ್ಯಾಂತರ ಮಂದಿ ಫಿದಾ ಆಗಿದ್ದಾರೆ.
ಈಕೆಯ ಫೋಟೋ ವೈರಲ್ ಆಗ್ತಿದ್ದಂಗೆ ರುದ್ರಾಕ್ಷಿ ಮಾರೋದು ಕಷ್ಟವಾಯಿತು. ಹೀಗಾಗಿ ಈಕೆಯನ್ನು ಕುಟುಂಬಸ್ಥರು ರಾತ್ರೋ ರಾತ್ರಿ ಆಕೆಯ ಅಜ್ಜಿಯ ಊರಿಗೆ ಕಳುಹಿಸಿದರು.
ರಸ್ತೆ ಬದಿಗಳಲ್ಲಿ, ಸಂತೆ, ಜಾತ್ರೆಗಳಲ್ಲಿ ಮಣಿ ಸರಗಳನ್ನು ಮಾರುತ್ತಿದ್ದ ಮೋನಾಲಿಗೆ ಈಗ ಅವುಗಳನ್ನು ಮಾರಾಟ ಮಾಡುವುದು ಕಷ್ಟವಾಗಿತ್ತು. ಈಕೆಯನ್ನು ನೋಡುತ್ತಿದ್ದಂತೆ ಜನ ಮುತ್ತಿಕೊಳ್ಳುತ್ತಿದ್ದಾರೆ. ಸೆಲ್ಪಿಗಾಗಿ ಮುಗಿ ಬೀಳುತ್ತಿದ್ದಾರೆ.
ಮಣಿ ಸರಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಇದೀಗ ಮೊನಾಲಿಸ ಹೊಸ ಬ್ಯುಸಿನೆಸ್ ಶುರುಮಾಡಿದ್ದಾಳೆ. ಸದ್ಯ ಮೋನಾಲಿಸಾ ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದಲ್ಲಿ ತನ್ನ ಅಜ್ಜನೊಂದಿಗೆ ಇದ್ದಾಳೆ. ತನ್ನನ್ನು ಅಪ್ಪ ಕುಂಭಮೇಳದಿಂದ ಕಳುಹಿಸಿದ್ದು ಏಕೆ ಅನ್ನೋ ಸಂಗತಿಯನ್ನೂ ಮೊನಾಲಿಸಾ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲ, ತನ್ನ ಪುಟ್ಟ ಮನೆ ತೋರಿಸಿ ತನ್ನ ಸ್ಥಿತಿ ಎಂಥದ್ದು ಅನ್ನೋದನ್ನ ಹೇಳಿದ್ದಾಳೆ.
ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದ್ದಳು. ಆದ್ರೀಗ ಈಕೆಯ ರೇಂಜೇ ಬದಲಾಗಿದೆ. ಹೊಸ ಬ್ಯುಸಿನೆಸ್ ಆರಂಭಿಸೋ ಮೂಲಕ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ.
ಮೊನಾಲಿಸಾ ಭೋಂಸ್ಲೆ 08 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾಳೆ. ಈಕೆಯ ಪ್ರತೀ ವಿಡಿಯೋ ಮಿಲಿಯನ್ ವೀವ್ಸ್ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾಳೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್ಸೈಟ್ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ ₹10 ಲಕ್ಷ ದಾಟಲಿದೆ ಎಂದು ಅಂದಾಜಿಸುತ್ತಿದೆ.