ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೊರಿದ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ ಹಾಗೂ ಆರ್ಸಿಬಿ ಮಾಜಿ ನಾಯಕ ಬ್ಯಾಟಿಂಗ್ಗೆ ಬಂದಾಗ ನನ್ನ ಮಕ್ಕಳನ್ನು ಬಡಿದೆಬ್ಬಿಸುತ್ತೇನೆಂದು ಹೇಳಿದ್ದಾರೆ.
ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದಗ್ದ 172 ರನ್ ಗುರಿ ಹಿಂಬಾಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ್ದರು ಹಾಗೂ ಫಾಫ್ ಡು ಪ್ಲೆಸಿಸ್ ಜೊತೆ 148 ರನ್ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಆರ್ಸಿಬಿ ತಂಡಡ 8 ವಿಕೆಟ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕ್ರಿಕ್ಬಝ್ ಜೊತೆ ಮಾತನಾಡಿದ ಮೈಕಲ್ ವಾನ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ತುಂಬಾ ಖುಷಿಯಾಗುತ್ತದೆ. ಕೊಹ್ಲಿ ಬ್ಯಾಟಿಂಗ್ ನೋಡುವಂತೆ ನನ್ನ ಮಕ್ಕಳಿಗೆ ಹೇಳುತ್ತೇನೆಂದು ಎಂದಿದ್ದಾರೆ.
“ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬಂದಾಗಲೆಲ್ಲಾ ನಾನು ನನ್ನ ಮಕ್ಕಳ ಕೊಠಡಿಯ ಬಾಗಿಲನ್ನು ಬಡಿಯುತ್ತೇನೆ ಹಾಗೂ ಬ್ಯಾಟಿಂಗ್ ನೋಡುವಂತೆ ಹೇಳುತ್ತೇನೆ. ಇತ್ತೀಚೆಗೆ ಮಕ್ಕಳು ರೂಂನಲ್ಲಿ ಸೇರಿಕೊಂಡು ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳ ನೋಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಆದರೆ, ನಾನು ನನ್ನ ಮಕ್ಕಳಿಗೆ ಬ್ಯಾಟಿಂಗ್ ನೋಡುವಂತೆ ಹೇಳುತ್ತೇನೆ. ವಿರಾಟ್ ಕೊಹ್ಲಿ ಮೇಲಿನ ನನ್ನ ದೃಷ್ಟಿಕೋನ ಒಂದೇ ರೀತಿ ಇದೆ. ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್,” ಎಂದು ವಾನ್ ಗುಣಗಾನ ಮಾಡಿದ್ದಾರೆ.
“ಕೊಹ್ಲಿ ಬ್ಯಾಟಿಂಗ್ ತುಂಬಾ ಸರಳವಾಗಿದೆ. ಅವರು ಕೆಲ ಸ್ಟೋಕ್ಸ್, ಅವರ ಬ್ಯಾಲೆನ್ಸ್, ಅವರ ಟೈಮಿಂಗ್ಸ್, ಮೈದಾನದ ಎಲ್ಲಾ ಕಡೆ ಚೆಂಡನ್ನು ಹೊಡೆಯುವುದು, ಡ್ರೈವ್ಗಳು, ಫ್ಲಿಕ್ ಮೂಲಕ ಸಿಕ್ಸರ್ಗಳು ಸೇರಿದಂತೆ ಅವರ ಎಲ್ಲಾ ಬಗೆಯ ಶಾಟ್ಸ್ ತುಂಬಾ ಆಸಕ್ತಿಯಿಂದ ಕೂಡಿರುತ್ತದೆ. ಯಾವಾಗಲೂ ಕೊಹ್ಲಿ ಬ್ಯಾಟಿಂಗ್ ನೋಡಲು ಖುಷಿಯಾಗುತ್ತದೆ,” ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.