ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರಿದೆ. ಹೀಗಾಗಲೇ ಚುನಾವಣೆ ಆಯೋಗ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಕಳೆದ 6 ದಿನಗಳಲ್ಲಿ ಚುನಾವಣಾಧಿಕಾರಿಗಳು, ಪೊಲೀಸರು ಹಾಗೂ ಐಟಿ ಟೀಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗದು ಸೇರಿದಂತೆ ಬರೋಬ್ಬರಿ 47 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದ 6 ದಿನಗಳಲ್ಲಿ ನಗದು, ಡ್ರಗ್ಸ್, ಚಿನ್ನ ಸೇರಿದಂತೆ 47 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿದಾಗಿನಿಂದ ಫ್ಲೈಯಿಂಗ್ ಸ್ಕ್ವಾಡ್ಗಳು,
ಎಸ್ಎಸ್ಟಿಗಳು, ಪೊಲೀಸ್ ಮತ್ತು ಐಟಿ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ, ದಾಖಲೆಗಳಿಲ್ಲದ 12,82,94,000 ರೂಪಾಯಿ ನಗದು ವಶ, 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ ವಶ, 41 ಲಕ್ಷ ಮೌಲ್ಯದ 79.44 ಕೆ.ಜಿ. ಮಾದಕ ವಸ್ತುಗಳ ವಶ, 6 ಕೋಟಿ 72 ಲಕ್ಷ ಮೌಲ್ಯದ 13. 575 ಕೆ.ಜಿ ಚಿನ್ನ ವಶ, 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ವಶ, ಕುಕ್ಕರ್, ಸೀರೆ, ಹೆಲ್ಮೆಟ್ ಹಾಗೂ ಕ್ರಿಕೆಟ್ ಕಿಟ್ಗಳು ಸೇರಿ 10 ಕೋಟಿ ರೂಪಾಯಿ ಮೌಲ್ಯದ ಅಧಿಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ ಪತ್ತೆಯಾದ ನಗದು, ಮದ್ಯ, ಡ್ರಗ್ಸ್ ವಶಪಡಿಸಿಕೊಂಡ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ 316 ಎಫ್ಐಆರ್ ದಾಖಲಾಗಿವೆ.