ಬೆಂಗಳೂರಿನ ಪೊಲೀಸ್ ಕಮಿಷನರ್ಗೆ ಅನಗತ್ಯವಾಗಿ ಬೆಳ್ಳಿ, ಚಿನ್ನ, ಡೈಮಂಡ್ ಆಭರಣಗಳನ್ನು ವಶಕ್ಕೆ ಪಡೆಯಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಚಿನ್ನಾಭರಣ ಸಂಘದ ಅಧ್ಯಕ್ಷರೂ ಆಗಿರುವ ಟಿ ಎ ಶರವಣ ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳು ಚಿನ್ನದ ವ್ಯಾಪಾರಿಗಳಿಗೆ ಶುಭ ಗಳಿಗೆ ಆಗಿರುತ್ತದೆ.
ಈ ಎರಡು ತಿಂಗಳಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಗ್ರಾಹಕರು ಅತಿ ಹೆಚ್ಚು ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸುತ್ತಾರೆ. ಏಪ್ರಿಲ್ 23ರಂದು ಅಕ್ಷಯ ತೃತೀಯ ಕೂಡ ಇದೆ. ಅಕ್ಷಯ ತೃತೀಯ ದಿನದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ ಅಂಗಡಿಗಳಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು, ವಿತರಕರು, ಹಂಚಿಕೆದಾರರು ದೇಶದ ಹಲವು ರಾಜ್ಯಗಳಿಂದ ಕರ್ನಾಟಕಕ್ಕೆ ಚಿನ್ನ, ಬೆಳ್ಳಿ ಆಭರಣಗಳನ್ನು ರಫ್ತು ಮಾಡಲಾಗುತ್ತದೆ.
ಹೊರ ರಾಜ್ಯದಿಂದ ಬರುವ ಚಿನ್ನ, ಬೆಳ್ಳಿಯನ್ನು ಜಿಲ್ಲೆ, ಜಿಲ್ಲೆಗೂ ವಿತರಿಲಾಗುತ್ತದೆ. ಹೀಗಾಗಿ ಮುಂಬರು ವಿಧಾನಸಭಾ ಚುನಾವಣಾ ನಿಮಿತ್ತ ಪೊಲೀಸರು ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದು, ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆಯುತ್ತಿದ್ದಾರೆ.ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ಚಿನ್ನ, ಬೆಳ್ಳಿಗೆ ದಾಖಲೆಯನ್ನು ಒದಗಿಸಿ, ಮರಳಿ ವಾಪಸ್ ಪಡೆಯಲು ಹಲವು ದಿನಗಳೇ ಬೇಕಾಗುತ್ತದೆ. ಇದರಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಬಹಳಷ್ಟು ನಷ್ಟು ಉಂಟಾಗುತ್ತಿದೆ. ಸೂಕ್ತ ದಾಖಲೆಗಳಿರುವ ಚಿನ್ನ, ಬೆಳ್ಳಿ, ವಜ್ರಗಳ ಸರಬರಾಜಿಗೆ ಸಹಕರಿಸಿ ಎಂದು ಕರ್ನಾಟಕ ರಾಜ್ಯ ಜ್ಯುವೆಲರಿ ಅಸೋಸಿಯೇಷನ್ ಪರವಾಗಿ ಮನವಿ ಮಾಡಿದ್ದಾರೆ.