ಚಲನೆಯ ನಿಯಮವನ್ನೇ ಅನುಸರಿಸಿ ಮಾಡಲಾಗಿರುವ ಕಥೆಯಲ್ಲಿ ಭೌತಶಾಸ್ತ್ರದ ಸೂತ್ರಗಳು ತಳುಕು ಹಾಕಿಕೊಂಡ ವಿಶೇಷಗಳು ಕಾಣುವುದು ಮತ್ತು ಪ್ರೇಕ್ಷಕನ ಐಕ್ಯೂ ಪರೀಕ್ಷೆಗೆ ಒಳಪಡಿಸುವುದು ರೋಮಾಂಚಕ ವಿಷಯವಾಗುತ್ತದೆ. ಗಣನ ಸಾಕು ತಾಯಿ ಸುಜಾತ 25 ವರ್ಷಗಳ ಹಿಂದೆ ಸಾವಿಗೀಡಾದ ಕುತೂಹಲದ ವಿಷಯ ಪತ್ತೆ ಹಚ್ಚುವ ದಾರಿಯಲ್ಲಿ ವರ್ತಮಾನದಲ್ಲಿ ಆಕೆಯ ಜೊತೆಗಿದ್ದವರನ್ನು ಪತ್ತೆ ಹಚ್ಚುವ ಸವಾಲು ಚಿತ್ರದ ಕುತೂಹಲದ ಇನ್ನೊಂದು ಘಟ್ಟ. ಎಚ್.ಜಿ.ವೇಲ್ಸ್ ಟೈಮ್ ಟ್ರಾವೆಲ್ ನ ಕಥೆ ಟೈಮ್ ಮಷಿನ್ ಹುಟ್ಟಿಸುವ ಅದೇ ಕುತೂಹಲ ಹುಟ್ಟಿಸುವಲ್ಲಿ ನಿರ್ದೇಶಕರು ಇಲ್ಲಿ ಸಫಲ. ಅದೇ ರೀತಿ ಭ್ರಮೆಯನ್ನೂ ಕಾಯ್ದುಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ
ಸ್ಯಾಂಡಲ್ ವುಡ್ ಡೈನಾಮಿಕ್-ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ವರ್ಷದ ಮೊದಲ ಪೇಸ್ ನಲ್ಲೇ ಗೆದ್ದಿದ್ದಾರೆ..! ಸಿನಿಮಾ ಇಂಡಸ್ಟ್ರಿಗೊಂದು ಕ್ಲಾಸ್ ಹಿಟ್ ಬೇಕಾಗಿರೋ ಬೆನ್ನಲ್ಲೇ ‘ಗಣ’ ಥಿಯೆಟರ್ ಗಳಲ್ಲಿ ತನ್ ಸೌಂಡ್ ಶುರುಹಚ್ಚಿಕೊಳ್ತಿದೆ. ಇಷ್ಟುದಿನ ಪ್ರಜ್ವಲ್ ದೇವರಾಜ್ ಕಾಯ್ತಿದ್ದ ಗೆಲುವಿನ ಕ್ಷಣವನ್ನ ನಿಜವಾಗಿಸೋಕೆ ಗಣ ಅದ್ದೂರಿಯಾಗಿ ಪ್ರದರ್ಶನವಾಗ್ತಿದೆ. ಟ್ರೈಲರ್ ನಲ್ಲಿ ಮಾಸ್ ಐಟಂ ಎನಿಸಿಕೊಂಡಿದ್ದ ಗಣ, ಚಿತ್ರಮಂದಿರಗಳಲ್ಲಿ ಬೇರೆಯಾದೇ ಕಿಕ್ ಕೊಡುತ್ತೆ.
ತಲೆಗೆ ಕೆಲಸ ಕೊಡೋ ಆಡಿಯನ್ಸ್ ಗೆ ಗಣ ಫುಲ್ ಮೀಲ್ಸ್. ವರ್ಷಗಳ ಟೈಮ್ ಸರ್ಕಲ್ ಯೂನಿಕ್ ಮನರಂಜನೆ ಕೊಡ್ತಿದೆ. ಸಿನಿಮಾದಲ್ಲಿ ನಡೆದಿದ್ದು ನಿಜನಾ ಅಥವಾ ಭ್ರಮೆನಾ ಅಂತ ಗೊತ್ತಾಗೋ ಅಷ್ಟರಲ್ಲಿ ಕ್ಲೈಮ್ಯಾಕ್ಸ್ ಆಟ ತೋರಿಸುತ್ತೆ. ಪ್ರಜ್ವಲ್, ವೇದಿಕಾ ಹಾಗೂ ಯಶ ಶಿವಕುಮಾರ್ ತಮಗೆ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹರಿಪ್ರಸಾದ್ ಜಕ್ಕ ಡೈರೆಕ್ಷನ್ ಮತ್ತು ಪಾರ್ಥು ನಿರ್ಮಾಣ ಪ್ರೀತಿ ಗಣನ ಓಟವನ್ನ ಉಳಿಸಿಕೊಳ್ಳುತ್ತೆ. ಒಂದೊಳ್ಳೆ ಸಿನಿಮಾ ಕೊಟ್ಟಿದ್ದೀವಿ, ಹಿಸ್ಟರಿ ಕ್ರಿಯೆಟ್ ಆಗಬೇಕು ಅಂದ್ರೇ ಪ್ರೇಕ್ಷಕರ ಇನ್ನಷ್ಟು ಸಪೋರ್ಟ್ ಬೇಕು ಅಂತಿದೆ ‘ಗಣ’ ಸಂಭ್ರಮ..!