ನಟಿ ಶ್ವೇತಾ ತಿವಾರಿ ಪುತ್ರಿ ಪಾಲಕ್ ತಿವಾರಿ ಸದ್ಯ ಬಿಟೌನ್ ಅಂಗಳದಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ಪಾಲಕ್ ಸದ್ಯ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದು ಈ ಬಗ್ಗೆ ಪಾಲಕ್ ಸ್ಪಷ್ಟನೆ ನೀಡಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟನೆಯ `ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಚಿತ್ರದ ಮೂಲಕ ಪಾಲಕ್ ಎಂಟ್ರಿ ಕೊಡ್ತಿದ್ದಾರೆ. ಮತ್ತೊಂದಿಷ್ಟು ಸಿನಿಮಾಗಳು ನಟಿಯ ಕೈಯಲ್ಲಿದ್ದು ಈ ಮಧ್ಯೆ ಇಬ್ರಾಹಿಂ ಜೊತೆಗಿನ ಡೇಟಿಂಗ್ ಕುರಿತು ಸುದ್ದಿಯಲ್ಲಿದ್ದಾರೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಎರಡು ಚಿತ್ರಗಳ ಶೂಟಿಂಗ್ ನನ್ನನ್ನು ತುಂಬಾ ಬ್ಯುಸಿಯಾಗಿರುವಂತೆ ಮಾಡಿದ್ದು, ಜೀವನದಲ್ಲಿ ತೃಪ್ತಿ ಇದೆ. ಸಿನಿಮಾ ನನ್ನ ಏಕೈಕ ಗಮನವಾಗಿದ್ದು, ನನಗಿದು ಮಹತ್ವದ ವರ್ಷ. ನಾನು ವೃತ್ತಿಯಲ್ಲಿ ಒಂದು ಭಾಗವಾಗಿರುವುದರಿಂದ ಈ ವದಂತಿಗೆಲ್ಲಾ ಕಿವಿಗೊಡುವುದಿಲ್ಲ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ. ನನ್ನ ಕೆರಿಯರ್ ನನ್ನ ಮೊದಲ ಪ್ರಾಮುಖ್ಯತೆ. ಆದ್ದರಿಂದ ನಾನು ಅದರ ಮೇಲೆ ನನ್ನ ಶಕ್ತಿಯನ್ನು ಕೇಂದ್ರೀಕರಿಸುತ್ತಿದ್ದೇನೆ ಎಂದು ಪಾಲಕ್ ತಿವಾರಿ ಹೇಳಿದ್ದಾರೆ.
ಈ ಹಿಂದೆ, ಪಾಲಕ್- ಇಬ್ರಾಹಿಂ ಜೊತೆ ರೆಸ್ಟೋರೆಂಟ್ನಿಂದ ಹೊರ ಬರುವಾಗ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಿದ್ದರು. ಈ ವೇಳೆ ಪಾಲಕ್ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಈ ಬಗ್ಗೆ ಇದೀಗ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅಮ್ಮನಿಗೆ ಫ್ರೆಂಡ್ಸ್ ಜೊತೆ ಹೊರಗಡೆ ಬರುವ ಬಗ್ಗೆ ಸುಳ್ಳು ಹೇಳಿದ್ದೆ, ಹಾಗಾಗಿ ಮುಖ ಮುಚ್ಚಿಡಲು ಪ್ರಯತ್ನಿಸಿದೆ ಎಂದು ಪಾಲಕ್ ತಿಳಿಸಿದ್ದಾರೆ.