ಹಿಂದಿನ ಕಾಲದಿಂದಲೂ ಸಹ ಆಯುರ್ವೇದದ ಹಲವಾರು ಪ್ರಕಾರಗಳಲ್ಲಿ ಬಹಳಷ್ಟು ವಿಚಿತ್ರ ಕಾಯಿಲೆಗಳಿಗೆ ಔಷಧಿ ಕೊಟ್ಟು ವಾಸಿ ಮಾಡುವ ಅದ್ಭುತ ಗುಣ ಲಕ್ಷಣ ಬೇವಿನ ಪ್ರತಿಯೊಂದು ಭಾಗಕ್ಕೂ ಇದೆ ಎಂದರೆ ನಂಬಲೇಬೇಕು. ಬೇವಿನ ಹೂವು, ಬೇವಿನ ಎಲೆ, ಬೇವಿನ ಚಕ್ಕೆ ಮತ್ತು ಬೇವಿನ ಬೇರು ತಮ್ಮದೇ ಆದ ಒಂದೊಂದು ಪ್ರಕಾರಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಉಪಯೋಗಕ್ಕೆ ಬರುತ್ತವೆ.
ಸಂಸ್ಕೃತದಲ್ಲಿ ಬೇವನ್ನು ” ನಿಂಬ ” ಎಂದು ಕರೆಯುತ್ತಾರೆ. ಇದರ ಅರ್ಥ ಒಳ್ಳೆಯ ಆರೋಗ್ಯ ಎಂದು. ಸಾಮಾನ್ಯವಾಗಿ ಬಹುತೇಕ ಔಷಧಿಗಳು ಕಹಿಯಾಗಿರುತ್ತವೆ. ಇದಕ್ಕೆ ಬೇವು ಕೂಡ ಹೊರತಲ್ಲ.
ಹೆಚ್ಚು ಕಹಿ ಇದ್ದಷ್ಟು ದೇಹದಲ್ಲಿ ಕಂಡು ಬರುವ ರೋಗಕಾರಕ ಸೂಕ್ಷ್ಮಾಣುಗಳನ್ನು ಕೊಲ್ಲುವಂತಹ ಶಕ್ತಿ ಯಾವುದೇ ಔಷಧಿಗಳಿಗೆ ಇರುತ್ತದೆ. ಈ ಲೇಖನದಲ್ಲಿ ಬಿಸಿ ನೀರಿಗೆ ಬೇವಿನ ಎಲೆಗಳ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಏನೆಲ್ಲಾ ಉಪಯೋಗಗಳು ಉಂಟಾಗುತ್ತವೆ ಎಂಬುದನ್ನು ನೋಡಲಿದ್ದೇವೆ.
- ವಾರಕ್ಕೊಮ್ಮೆ ಬೇವು ಅಥವಾ ಬೇವಿನ ಎಲೆಯ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನು & ತಲೆಹೊಟ್ಟು ನಿವಾರಣೆಯಾಗುತ್ತದೆ. ಬೇವಿನ ಎಲೆಯ ನೀರಿನ್ನು ಬಳಸುವಾಗ ಶಾಂಪೂ ಬಳಸದಿರುವುದು ಉತ್ತಮ. ದೇಹದಲ್ಲಿ ಗುಳ್ಳೆಗಳು & ಹುಣ್ಣುಗಳಿಂದ ಬಳಲುತ್ತಿರುವವರಿಗೆ ಬೇವಿನ ಎಲೆಯ ನೀರಿನ ಸ್ನಾನವು ರಾಮಬಾಣವಾಗಿದೆ. ಇದು ದೇಹದ ಮೇಲಿನ ಗುಳ್ಳೆಗಳು & ದದ್ದುಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
- ಬೇವಿನ ಎಲೆಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿಯಾಗಿದೆ. ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಮತ್ತು ಅದಕ್ಕೆ ೨ ಚಮಚ ಮೊಸರನ್ನು ಬೆರೆಸಿ ಮುಖದ ಮೇಲೆ ಹಚ್ಚಬೇಕು. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
- ಅತಿಯಾದ ಬೆವರುವಿಕೆಗೆ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ.
- ಒಂದು ಪಾತ್ರೆ ಬಿಸಿನೀರಿನಲ್ಲಿ ಬೇವಿನ ಎಲೆಗಳನ್ನು ತೊಳೆದು ಹಾಕಿ ಅದರ ಬಣ್ಣ ಬಿಡುವವರೆಗೂ ಶೋಧಿಸಿ ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಈ ನೀರಿನಿಂದ ಸ್ನಾನ ಮಾಡಬೇಕು.
- ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೊಡವೆ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಬೇವಿನ ಎಲೆಯ ನೀರಿನಿಂದ ಮುಖವನ್ನು ತೊಳೆದರೆ ಮುಖದ ಮೇಲೆ ನೈಸರ್ಗಿಕ ಹೊಳಪು ಕಾಣಬಹುದು. ಬೇವಿನ ಎಲೆಯ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.
- ಬೇವಿನ ನೀರಿನ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕಣ್ಣಿನ ಸೋಂಕನ್ನು ತಡೆಗಟ್ಟಲು ಮತ್ತು ಕಣ್ಣಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಣ್ಣುಗಳಿಗೂ ಪ್ರಯೋಜನಕಾರಿಯಾಗಬಲ್ಲದು. ಇನ್ನೂ ಕಣ್ಣಿನ ಭಾಗದಲ್ಲಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಬೇವಿನ ನೀರಿನಿಂದ ತಲೆ ಸ್ನಾನ ಮಾಡಿದರೆ, ಕಣ್ಣುಗಳ ನರಗಳ ಆರೋಗ್ಯ ವೃದ್ಧಿಗೊಂಡು ಕಣ್ಣೀನ ದೃಷ್ಟಿಗೂ ಅನುಕೂಲಕರವಾಗಿದೆ.