ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಶೀರ್ಷಿಕೆ ಇಡಲಾಗಿದೆ. ಸಂಚಿತ್ ಜನ್ಮದಿನದ ಪ್ರಯುಕ್ತ ಇಂದು (ಫೆಬ್ರವರಿ 5) ಟೈಟಲ್ ಅನೌನ್ಸ್ ಆಗಿದೆ. ರೆಟ್ರೋ ಲುಕ್ ನಲ್ಲಿ ಸಂಚಿತ್ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ ಎಂದು ಹೇಳಲಾಗಿದೆ.
‘ಕ್ರೇಜಿ ಸ್ಟಾರ್’ ಹೆಸರಿನ ಬಾರ್ಗೆ ಇಬ್ಬರ ಆಗಮನ ಆಗುತ್ತದೆ. ಇದರಲ್ಲಿ ಒಬ್ಬರು ವಿದೇಶಿ ಮಹಿಳೆ. ಮತ್ತೋರ್ವ ಲೋಕಲ್ ಗೈಡ್. ‘ಪ್ರಳಯಾಂತಕ’ ಹೆಸರಿನ ಟೇಬಲ್ ಮೇಲೆ ವಿದೇಶಿ ಮಹಿಳೆ ಕೂರಲು ಹೋಗುತ್ತಾರೆ. ಆದರೆ, ಅಲ್ಲಿ ಕೂರಬೇಡಿ ಎಂದು ಎಲ್ಲರೂ ಕೋರುತ್ತಾರೆ. ಆ ಪ್ರಳಯಾಂತಕ ಟೇಬಲ್ ರಿಸರ್ವ್ ಆಗಿರೋದು ಪಚ್ಚನಿಗೆ! ಆಗ ಕಥಾ ನಾಯಕನ ಎಂಟ್ರಿ ಆಗುತ್ತದೆ.
ಸದ್ಯ ರಿಲೀಸ್ ಆಗಿರುವ ಪ್ರೋಮೋನ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಯೂರ್ ಪಟೇಲ್, ಕಾಜಲ್ ಕುಂದರ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಿವೇಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)