ಅಲ್ಲು ಅರ್ಜುನ್ ನಟನೆಯ ಪುಷ್ಪ ೨ ಸಿನಿಮಾದ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿದಲ್ಲಿ ಮಹಿಳೆ ಮೃತಪಟ್ಟ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯನ್ನು ಗಂಭಿರವಾಗಿ ತೆಗೆದುಕೊಂಡ ಆಂದ್ರ ಸರ್ಕಾರ ಚಿತ್ರರಂಗದ ಬಗ್ಗೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಈ ಘಟನೆ ಮಾಸುವ ಮುನ್ನವೇ ನಟ ಜೂನಿಯರ್ ಎನ್ಟಿಆರ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಜೂನಿಯರ್ ಎನ್ಟಿಆರ್ ಇತ್ತೀಚೆಗೆ ಯಾವುದೇ ಅಭಿಮಾನಿಗಳನ್ನು ಭೇಟಿಯಾಗಿಲ್ಲ. ನಿತ್ಯವೂ ಅವರ ಮನೆಯ ಸಮೀಪ ಕೆಲವು ಅಭಿಮಾನಿಗಳು ಬರುತ್ತಿದ್ದಾರೆ. ಅವರ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸಿದ್ದು ಇದೆ. ಆದರೆ, ಇದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಜೂನಿಯರ್ ಎನ್ಟಿಆರ್ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಪ್ರೆಸ್ ಸ್ಟೇಟ್ಮೆಂಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಬರೆದಿದ್ದಾರೆ. ಶೀಘ್ರವೇ ‘ಫ್ಯಾನ್ ಮೀಟ್’ ಮಾಡೋದಾಗಿ ಅವರು ಹೇಳಿದ್ದಾರೆ. ಎಲ್ಲಾ ಒಪ್ಪಿಗೆ ಪಡೆದ ಬಳಿಕ ಅವರು ಇದನ್ನು ಆಯೋಜನೆ ಮಾಡಲಿದ್ದಾರೆ.
‘ನೀವು ತೋರುತ್ತಿರುವ ಪ್ರೀತಿಗೆ ಜೂನಿಯರ್ ಎನ್ಟಿಆರ್ ಅವರು ಖುಷಿ ಪಟ್ಟಿದ್ದಾರೆ. ನಟನ ಭೇಟಿ ಮಾಡಬೇಕು ಎನ್ನುವ ಅಭಿಮಾನಿಗಳ ತುಡಿತವನ್ನು ಅವರು ಅರಿತುಕೊಂಡಿದ್ದಾರೆ. ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಶೀಘ್ರವೇ ಒಂದು ಭೇಟಿಯನ್ನು ಆಯೋಜನೆ ಮಾಡಲಿದ್ದಾರೆ ಎಂದು ಪ್ರೇಸ್ ಮೀಟ್ ನಲ್ಲಿ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದ ಬಳಿಕ ಈ ಕಾರ್ಯಕ್ರಮ, ಆಯೋಜನೆ ಗೊಳ್ಳಲಿದೆ’ ಎಂದು ಹೇಳಲಾಗಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)