ಹುಬ್ಬಳ್ಳಿ : ನಗರದ ಕೆ.ಎಲ್.ಇ ಔಷಧ ವಿಜ್ಞಾನ ಮಹಾವಿದ್ಯಾಲಯದ , ಫಾರ್ಮಸುಟಿಕ್ಸ್ ವಿಭಾಗದ ಸಹಯೋಗದಲ್ಲಿ ಎರಡು ದಿನದ “ಸ್ಕೀಲ್ ಬೇಸ್ ಟ್ರೈನಿಂಗ್ ಆನ್ ಆಪ್ಟಿಮೈಜೇಶನ್ ಪ್ರೇಮವರ್ಕ ಫಾರ್ ಡಿಸೈನ್ ಆಫ್ ಎಕ್ಸಪರಿಮೇಟ್ಸ್ ಆಂಡ್ ಸುಡೋ ಟ್ರನರಿ ಪೇಸ್ ಡೈಗ್ರಾಮ್” ಎಂಬ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಧಾರವಾಡ ಐಐಟಿಯ ಎಮ್ಎಮ್ಅಇ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಎಮ್ ಎ. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಔಷಧ ಕ್ಷೇತ್ರದಲ್ಲಿ ಸೈದ್ಧಾಂತಿಕ ಜ್ಞಾನ, ಪ್ರಾಯೋಗಿಕವಾಗಿ ರೂಡಿಸಿಕೊಳ್ಳಬೇಕಾದ ಕೌಶಲ್ಯ ತರಬೇತಿಗಳ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಎಚ್ಎಮ್ ವಿಶ್ವನಾಥಸ್ವಾಮಿ ಸಂಶೋಧನೆಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿದರು.
ಡಾ. ಫಾತಿಮಾ.ಎಸ್.ದಾಸನಕೊಪ್ಪ ಮತ್ತು ಉಪ ಸಂಯೋಜಕಾರಗಿ .ಹರೀಶ ಕೆ.ಎಚ್ ಮತ್ತು ಡಾ.ವಿಜಯ.ಕ.ಮೇಟಿ ಸೇರಿದಂತೆ ವಿಭಾಗದ ಇತರ ಪ್ರಾಧ್ಯಾಪಕರು ಮತ್ತು ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.