ಹಾವೇರಿ: ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಭಾರೀ ಅವಘಡವೊಂದು ಸಂಭವಿಸಿದೆ.
ಕಳಸಾರೋಹಣ ವೇಳೆ ಕ್ರೇನ್ನ ಬಕೆಟ್ ಕಳಚಿ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದ ಕಳಸಾರೋಹಣವನ್ನು ಕ್ರೆನ್ ಮೂಲಕ ಮಾಡುವ ವೇಳೆ, ಕ್ರೇನ್ನ ಬಕೆಟ್ ಕಳಚಿ ಬಿದ್ದಿದ್ದು, ಮಂಜುನಾಥ ಪಾಟೀಲ(40) ಮೃತರಾಗಿದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.