ಕುಂದಗೋಳ : ಬುದ್ಧ, ಬಸವ, ಗಾಂಧಿ ಜೊತೆಗೆ ‘ಮಹಾವೀರರ’ ಹೆಸರೂ ಕೇಳಿಬರುವಂತಾಗಲಿ ಎಂದು ದಿಗಂಬರ ಜೈನ ಸಮಾಜದ ಯುವ ಮುಖಂಡ ಬಸವರಾಜ ಯೋಗಪ್ಪನವರ ಆಶಯ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಆವರಣದಲ್ಲಿ ನಡೆದ ಮಹಾವೀರ ಜಯಂತಿಯಲ್ಲಿ ಅವರು ಪಾಲ್ಗೊಂಡು ಮಾತನಾಡಿ ಪ್ರಥಮವಾಗಿ ಅಹಿಂಸೆ ಬಗ್ಗೆ ಪ್ರತಿಪಾದಿಸಿದವರು ಮಹಾವೀರರು, ಇಂದು ಅವರನ್ನು ಎಲ್ಲರೂ ಮರೆತು ಮಾತನಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುತ್ತ ‘ಮಹಾವೀರ ಜಯಂತಿ’ಯನ್ನು ರಾಜ್ಯದ್ಯಂತ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಾಗಬೇಕು, ಆದರೆ ಬೆರಳೆಣಿಕೆಯಷ್ಟು ಕಚೇರಿಯಲ್ಲಿ ಮಾತ್ರ ಈ ಜಯಂತಿ ಆಚರಿಸಲಾಗುತ್ತಿದೆ. ಇದಕ್ಕೆ ಸರ್ಕಾರವೇ ಆದೇಶ ನೀಡಿ ಜಯಂತಿ ಆಚರಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನರಸಪ್ಪನವರ, ಸೌದಾಗಾರ, ಕಚುಸಾಪ ತಾಲ್ಲೂಕು ಅಧ್ಯಕ್ಷ ವೈ. ಡಿ. ಹೊಸೂರ, ಬಾಹುಬಲಿ ನಾಗರಳ್ಳಿ ಹಾಗೂ ಜೈನ ಸಮಾಜ ಬಾಂಧವರು ಇದ್ದರು.